ಹಿರಿಯರ ಕ್ರೀಡಾಕೂಟದಲ್ಲಿ ಕುಶಾಲಪ್ಪ ದೊಡ್ಡಮನೆ ರವರು- ರಾಜ್ಯಮಟ್ಟಕ್ಕೆ ಆಯ್ಕೆ

0

ಪಂಜ ಜೂನಿಯರ್ ಕಾಲೇಜು ಕೋಟಿ ಚೆನ್ನಯ ಕ್ರೀಡಾಂಗಣದಲ್ಲಿ ನಡೆದ ಸುಳ್ಯ, ಪುತ್ತೂರು, ಕಡಬ ತಾಲೂಕುಗಳ ಹಿರಿಯರ 10 ನೇ ಕ್ರೀಡಾಕೂಟದಲ್ಲಿ 75ರ ವಯೋಮಿತಿಯಲ್ಲಿ ಐವತ್ತೊಕ್ಲು ಗ್ರಾಮದ ದೊಡ್ಡಮನೆ ಕುಶಾಲಪ್ಪ ರವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅವರು 100 ಮೀಟರ್ ಓಟದಲ್ಲಿ , 200 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಮಂಗಳೂರು ಮಂಗಳ ಸ್ಟೇಡಿಯಂನಲ್ಲಿ ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.