ಗುತ್ತಿಗಾರಿನಲ್ಲಿ ಸಾಮೂಹಿಕ ಶನೈಶ್ವರ ಪೂಜೆ, “ಗುಳಿಗ ಶಿವ ಗುಳಿಗ” ಯಕ್ಷಗಾನ ಪ್ರದರ್ಶನ

0

ಶ್ರೀ ಅಯ್ಯಪ್ಪ ಸೇವಾ ಸಮಿತಿ ಗುತ್ತಿಗಾರು ವತಿಯಿಂದ ಗುತ್ತಿಗಾರಿನಲ್ಲಿ ಡಿ.31 ರಂದು ಸಾಮೂಹಿಕ ಶನೈಶ್ವರ ಪೂಜೆ ನಡೆದಿದ್ದು ಸಂಜೆ ಗುಳಿಗ ಶಿವ ಗುಳಿಗ ಯಕ್ಷಗಾನ ನಡೆಯಿತು.

ಶ್ರೀ ಕೃಷ್ಣಾ ಭಜನಾ ಮಂದಿರ ಗುತ್ತಿಗಾರು ಇಲ್ಲಿ
ಬೆಳಗ್ಗೆ ಶ್ರೀ ಗಣಪತಿ ಹೋಮ, ಬಳಿಕ ಸಾಮೂಹಿಕ ಶನೈಶ್ವರ ಪೂಜೆ ನಡೆದು ಸಂಜೆ ಶ್ರೀ ಕೃಷ್ಣಾ ಭಜನಾ ಮಂಡಳಿ ಗುತ್ತಿಗಾರು ವತಿಯಿಂದ ಭಜನಾ ಕಾರ್ಯ ಕ್ರಮ ನಡೆಯಿತು.

ಸಂಜೆ ಗುತ್ತಿಗಾರು ಹಿ.ಪ್ರಾ.ಶಾಲಾ ಮೈದಾನದಲ್ಲಿ ಶ್ರೀ ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷರಾದ ಸುರೇಶ್ ಕಂದ್ರಪ್ಪಾಡಿ ಅವರ ಅಧ್ಯಕ್ಷತೆಯನ್ನು ಧಾರ್ಮಿಕ ಸಭಾ ಕಾರ್ಯಕ್ರಮ ಜರಗಿತು. ಗುರುಸ್ವಾಮಿ ಶಿವ ಪ್ರಕಾಶ್ ಪ್ರಧಾನ ಭಾಷಣಕಾರರಾಗಿ ಮಾತನಾಡಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಆಚಾರ ವಿಚಾರ ಗಳನ್ನು ಸರಿಯಾಗಿ ಅಳವಡಿಸುವುದರ ಮೂಲಕ ಶುದ್ಧಚಾರಿಗಳು ಆಗುವುದು ಹೇಗೆ ಎಂಬ ಮಾಹಿತಿ ನೀಡಿದರು.

ಶ್ರೀ ಮುತ್ತಪ್ಪ ತಿರುವಪ್ಪ ದೇವಸ್ಥಾನ ಗುತ್ತಿಗಾರು ಇದರ ಆಡಳಿತ ಮುಕ್ತೇಶರರಾದ ವೆಂಕಟ್ ವಳಲಂಬೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಭರತ್ ಮುಂಡೋಡಿ, ಭಾರತೀಯ ರಬ್ಬರ್ ಬೋರ್ಡ್ ಸದಸ್ಯರಾದ ಮುಳಿಯ ಕೇಶವ ಭಟ್, ಶ್ರೀ ಕೃಷ್ಣ ಭಜನಾ ಮಂಡಳಿ ಗುತ್ತಿಗಾರು ಅಧ್ಯಕ್ಷರಾದ ರವಿ ಪ್ರಕಾಶ್ ಬಳ್ಳಡ್ಕ ಅತಿಥಿಗಳಾಗಿದ್ದರು. ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಾರ್ಯದರ್ಶಿ ಮೋಹನ್ ಕಡ್ತಲ್ ಕಜೆ ವೇದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಯಶಸ್ಸಿಗೆ ಕಾರಣ ಕರ್ತರಾದ ವಿಜೇಶ್ ಹಿರಿಯಡ್ಕ ಹಾಗೂ ದಯಾನಂದ ಕನ್ನಡ್ಕ, ಕೂವೆಕೋಡಿ ಸೋಮಪ್ಪ ಮತ್ತು ಅಚ್ಚುತ ಗುತ್ತಿಗಾರು ಇವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಭಾ ಕಾರ್ಯಕ್ರಮ ಬಳಿಕ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ಸರಪಾಡಿ ವತಿಯಿಂದ “ಗುಳಿಗ ಶಿವ ಗುಳಿಗ” ಯಕ್ಷಗಾನ ಪ್ರದರ್ಶನ ನಡೆಯಿತು. ಮೋಹನ್ ಸ್ವಾಗತಿಸಿ, ಅಚ್ಚುತ ವಂದಿಸಿದರು. ಸಚಿನ್ ಮೊಟ್ಟೆಮನೆ ಕಾರ್ಯಕ್ರಮ ನಿರೂಪಿಸಿದರು.