ಸೃಷ್ಟಿ ಫ್ಯಾನ್ಸಿಯಲ್ಲಿ ಬಂಪರ್ ಲಕ್ಕಿ ಡ್ರಾ

0

ಭಟ್ & ಭಟ್ ಯೂಟ್ಯೂಬ್ ಚಾನೆಲ್ ನ ಸಹೋದರರಿಗೆ ಸನ್ಮಾನ

ಸುಳ್ಯದ ಹೆಸರಾಂತ ಮೊಬೈಲ್ ಮಳಿಗೆ ಸೃಷ್ಟಿ ಫ್ಯಾನ್ಸಿಯಲ್ಲಿ ದಸರಾ, ದೀಪಾವಳಿ, ಕ್ರಿಸ್ಮಸ್, ಹೊಸ ವರ್ಷ, ಹಾಗೂ ಜಾತ್ರೋತ್ಸವದ ಪ್ರಯುಕ್ತ ನಡೆದಂತಹ ಕೂಪನ್ ನ ಬಂಪರ್ ಲಕ್ಕಿ ಡ್ರಾ ಜ. 5 ರಂದು ಸಂಜೆ ನಡೆಯಿತು.

ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡಾ.ವಿದ್ಯಾ ಶಾಂಭವ ಪಾರೆ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಭಟ್ & ಭಟ್ ಯೂ ಟ್ಯೂಬ್ ಚಾನೆಲ್ ಖ್ಯಾತಿಯ ಸಹೋದರರಾದ ಸುದರ್ಶನ್ ಭಟ್ ಬೆದ್ರಾಡಿ, ಮನೋಹರ್ ಭಟ್ ಬೆದ್ರಾಡಿ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ರೈ, ಶ್ರೇಯಸ್ ಕಾಂಪ್ಲೆಕ್ಸ್ ಮಾಲಕ ಹಾಗೂ ಉದ್ಯಮಿ ಸುಧಾಕರ್ ಕಾಮತ್, ನಿವೃತ್ತ ಪ್ರಾಂಶುಪಾಲ ಡಾ. ಎನ್.ಎ. ಜ್ಞಾನೇಶ್, ವಿಜೆ ವಿಖ್ಯಾತ್ ಮಾತನಾಡಿದರು.

ನ್ಯಾಯವಾದಿ ವೆಂಕಟ್ರಮಣ, ಡಿಜಿ ಪ್ಲಸ್ ಮಾಲಕ ಚಂದ್ರಶೇಖರ ನಂಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸೃಷ್ಟಿ ಫ್ಯಾನ್ಸಿಯ ಹಿತೈಷಿಗಳು ಭಾಗವಹಿಸಿದ್ದರು.

ಸೃಷ್ಟಿ ಫ್ಯಾನ್ಸಿಯ ಮಾಲಕ ಶೈಲೇಂದ್ರ ಸರಳಾಯ ಎಲ್ಲರನ್ನು ಸ್ವಾಗತಿಸಿದರು. ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.