ಪುರುಷರ ವಿಭಾಗ ಪ್ರಥಮ :ವಿಘ್ನೇಶ್ ಮೋಟಾರ್ಸ್ ಪಂಜ
ಮಹಿಳೆಯರ ವಿಭಾಗ ಪ್ರಥಮ :ನಾಗಬ್ರಹ್ಮ ಕೊಡಿಯಾಲ
ಶ್ರೀ ಉಳ್ಳಾಕುಲು ಕಲಾರಂಗ ಪಲ್ಲೋಡಿ -ಪಂಜ ಇದರ ಬೆಳ್ಳಿ ಹಬ್ಬ ಪ್ರಯುಕ್ತ ಪುರುಷರ 550 ಕೆ.ಜಿ. ಲೆವೆಲ್ ಮತ್ತು ಮಹಿಳೆಯರ ಮುಕ್ತ ಲೆವೆಲ್ ಮುಕ್ತ ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು.
ಪಂದ್ಯಾಟ ರೋಮಾಂಚಕಾರಿಯಾಗಿತ್ತು.
ಪಂದ್ಯಾಟಕ್ಕಾಗಿ ಅತ್ಯಂತ ಅಚ್ಚುಕಟ್ಟಾಗಿ ಕ್ರೀಡಾಂಗಣ ನಿರ್ಮಿಸಲಾಗಿತ್ತು.
ಪುರುಷರ ವಿಭಾಗದಲ್ಲಿ ವಿಜೇತರು ಪ್ರಥಮ ರೂ.8000, ದ್ವಿತೀಯ ರೂ.6000, ತೃತೀಯ ರೂ.4000, ಚತುರ್ಥ ರೂ.3000, ಮಹಿಳೆಯರ ವಿಭಾಗದಲ್ಲಿ ವಿಜೇತರು ಪ್ರಥಮ ರೂ.5000, ದ್ವಿತೀಯ ರೂ.3000, ತೃತೀಯ ಮತ್ತು ಚತುರ್ಥ ತಲ ರೂ.2000 ಹಾಗೂ ನಗದು ಬಹುಮಾನ ದೊಂದಿಗೆ ಟ್ರೋಪಿ ಪಡೆದರು.
ಪುರುಷರ ವಿಭಾಗದಲ್ಲಿ ವಿಘ್ನೇಶ್ ಮೋಟಾರ್ಸ್ ಪಂಜ(ಪ್ರಥಮ), ಶ್ರೀ ರಾಮ ಭಕ್ತ ಜನ ಬಿ.ಸಿ ರೋಡ್(ದ್ವಿತೀಯ), ಪಂಚಶ್ರೀ ಪಂಜ(ತೃತೀಯ), ವನದುರ್ಗಾ ಕುಂಜತ್ತಾಡಿ (ಚತುರ್ಥ) ಸ್ಥಾನ ಪಡೆದಿದ್ದಾರೆ.
ಮಹಿಳೆಯರ ವಿಭಾಗ ನಾಗಬ್ರಹ್ಮ ಕೋಡಿಯಾಲ( ಪ್ರಥಮ) , ಪರಿವಾರ ಪಂಜ( ದ್ವಿತೀಯ),ನಾಗಬ್ರಹ್ಮ ಕೋಡಿಯಾಲ (ತೃತೀಯ) ,ವನದುರ್ಗಾ ಕುಂಜತ್ತಾಡಿ (ಚತುರ್ಥ) ಸ್ಥಾನ ಪಡೆದಿದ್ದಾರೆ .ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ವಿಭಾಗಗಳಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು. ಸುರೇಶ್ ಪಡಿಪಂಡ, ಪ್ರದೀಪ್ ಎಣ್ಮೂರು ವೀಕ್ಷಕ ವಿವರಣೆ ನೀಡಿದರು.