ಕಂದ್ರಪ್ಪಾಡಿ : ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ

0

ದೇವಚಳ್ಳ ಗ್ರಾಮದ ಕಂದ್ರಪ್ಪಾಡಿಯಲ್ಲಿ ಸಾಮಾಜಿಕ ಕಳಕಳಿಯತ್ತ ಯುವ ಮನಸ್ಸುಗಳ ಚಿತ್ತ ಎಂಬ ಪರಿಕಲ್ಪನೆಯೊಂದಿಗೆ 2021ರಲ್ಲಿ ಅಸ್ತಿತ್ವಕ್ಕೆ ಬಂದ ಸೌಹಾರ್ದ ಸ್ಪೋರ್ಟ್ಸ್ ಕ್ಲಬ್ (ರಿ) ಕಂದ್ರಪ್ಪಾಡಿ ಇದರ ಆಶ್ರಯದಲ್ಲಿ 3ನೇ ವರ್ಷದ 7 ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಮೇ 5ರಂದು ಕಂದ್ರಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು.

ಪಂದ್ಯಾಟದ ಉದ್ಘಾಟನೆಯನ್ನು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಜಯರಾಮ ಕಡ್ಲಾರು ನೆರವೇರಿಸಿದರು, ಶಾಶ್ವತ ಫಲಕವನ್ನು ಉದ್ಯಮಿ ದೇವಿಪ್ರಸಾದ್ ಚಿಕ್ಮುಳಿ ಅನಾವರಣಗೊಳಿಸಿದರು.

7 ತಂಡಗಳ ಮಧ್ಯೆ ನಡೆದ ಪಂದ್ಯಾಟದಲ್ಲಿ ಶ್ರೀಮತಿ ಮೀನಾಕ್ಷಿ ಉಮೇಶ್ ಮುಂಡೋಡಿ ಮಾಲಕತ್ವದ ಮುಂಡೋಡಿ ವಾರಿಯರ್ಸ್ ಪ್ರಥಮ ಸ್ಥಾನ, ಪ್ರಸನ್ನ ಮುಂಡೋಡಿ ಮಾಲಕತ್ವದ ಸಾಧ್ವಿ ಕ್ರಿಕೆಟರ್ಸ್ ದ್ವಿತೀಯ, ಎಸ್.ಎಂ.ಸಿ. ಕರಂಗಲ್ಲು ತೃತೀಯ ಮತ್ತು ಗೌಡ ಕೆಟರರ್ಸ್ ಚತುರ್ಥ ಬಹುಮಾನವನ್ನು ಪಡೆದುಕೊಂಡಿತು. ವೈಯಕ್ತಿಕ ಬಹುಮಾನಗಳಾದ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಓಂಪ್ರಕಾಶ್ ಮುಂಡೋಡಿ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ರಜತ್ ಮುಂಡೋಡಿ, ಉತ್ತಮ ದಾಂಡಿಗನಾಗಿ ಪ್ರಸನ್ನ ಕಾಯರ, ಉತ್ತಮ ಎಸೆತಗಾರ ಮಾಧವ ಎರ್ದಡ್ಕ, ಉತ್ತಮ ಗೂಟರಕ್ಷಕ ಕಾರ್ತಿಕ್ ದೇವ, ಉತ್ತಮ ಕ್ಷೇತ್ರರಕ್ಷಕ ಪ್ರಶಸ್ತಿಯನ್ನು ಜಯಂತ ಗೌರಿಗುಂಡಿ ಪಡೆದುಕೊಂಡರು.

ಸಮಾರೋಪ ಸಮಾರಂಭದ ಸಭಾಧ್ಯಕ್ಷತೆಯನ್ನು ಸೌಹಾರ್ದ ಸ್ಪೋರ್ಟ್ಸ್ ಕ್ಲಬ್ (ರಿ) ಕಂದ್ರಪ್ಪಾಡಿ ಇದರ ಅಧ್ಯಕ್ಷರಾದ ಸುಕುಮಾರ್ ಕಂದ್ರಪ್ಪಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಂದ್ರಪ್ಪಾಡಿ ಶಾಲಾ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ವಿಜೇಶ್ ಹಿರಿಯಡ್ಕ, ಶ್ರೀಮತಿ ರೇಖಾ ಕಂದ್ರಪ್ಪಾಡಿ, ಲಿಂಗಪ್ಪ ಗೌಡ ಚಿತ್ತಡ್ಕ, ಶ್ರೀಮತಿ ಮೀನಾಕ್ಷಿ ಉಮೇಶ್ ಮುಂಡೋಡಿ, ನೀತಾ ಪ್ರಶಾಂತ್ ದೊಡ್ಡಿಹಿತ್ಲು ಮತ್ತು ಸೌಹಾರ್ದ ಸ್ಪೋರ್ಟ್ಸ್ ಕ್ಲಬ್ (ರಿ) ಕಂದ್ರಪ್ಪಾಡಿ ಇದರ ಕ್ರೀಡಾ ಕಾರ್ಯದರ್ಶಿಯಾದ ರಜತ್ ಮುಂಡೋಡಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಂದ್ರಪ್ಪಾಡಿ ಶಾಲೆಗೆ ಸೌಹಾರ್ದ ಸ್ಪೋರ್ಟ್ಸ್ ಕ್ಲಬ್ (ರಿ) ಕಂದ್ರಪ್ಪಾಡಿ ಇದರ ವತಿಯಿಂದ ಮಿಕ್ಸರ್ ಗ್ರೈಂಡರ್ ಅನ್ನು ಕೊಡುಗೆಯಾಗಿ ನೀಡಲಾಯಿತು. ವೀಕ್ಷಕ ವಿವರಣೆಗಾರ ನವೀನ್ ಬಾಂಜಿಕೋಡಿ ಕಾರ್ಯಕ್ರಮ ನಿರೂಪಣೆ ಮಾಡಿದರು.