ಕನಕಮಜಲು: ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಶುಭಾರಂಭ

0

ಕನಕಮಜಲಿನಲ್ಲಿ ಉಮ್ಮರ್ ಪಂಜ ಅವರ ಮಾಲಕತ್ವದಲ್ಲಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರವು ಮೇ.20ರಂದು ಶುಭಾರಂಭಗೊಂಡಿತು.

ಕನಕಮಜಲು ಗ್ರಾಮ ಪಂಚಾಯತಿ ಸದಸ್ಯ ಇಬ್ರಾಹಿಂ ಕಾಸಿಂ‌ ಅವರು ನೂತನ ಗ್ರಾಮ ಒನ್ ಸೇವಾ ಕೇಂದ್ರವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಮಹಮ್ಮದ್ ಫವಾಜ್ ಕನಕಮಜಲು, ಕನಕಮಜಲು ಶ್ರೀ ಆತ್ಮಾರಾಮ ಭಜನಾ ಮಂದಿರದ ನಿರ್ದೇಶಕ ವಿಜಯಕುಮಾರ್ ನರಿಯೂರು, ಅಬೂಬಕ್ಕರ್ ಕೆ.ಇ., ಸಿದ್ಧೀಕ್ ಪಂಜಿಗುಂಡಿ, ಮಹಮ್ಮದ್ ಹಸನ್ ಗೌಸಿಯಾ ಸುಣ್ಣಮೂಲೆ, ಶಾಕಿರ್ ಕಂಚಿಲ್ಪಾಡಿ ಉಪಸ್ಥಿತರಿದ್ದರು.