ಪುತ್ತೂರಿನಲ್ಲಿ ನಡೆದ ಸುಧಾನ ಪ್ರೀಮಿಯರ್ ಲೀಗ್ 2024ರ ಸೂಪರ್ ಸ್ಮಾಷ್ ಬ್ಯಾಡ್ಮಿಂಟನ್ ಅಕಾಡೆಮಿ ಪಂದ್ಯಾಟ

0

ಸುಳ್ಯದ ಆಟಗಾರರು ಭಾಗವಹಿಸಿದ ಶಟಲ್ ವಾರಿಯರ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ

ಪುತ್ತೂರಿನಲ್ಲಿ ಮೇ 19 ರಂದು ನಡೆದ ಸೂಪರ್ ಸ್ಮ್ಯಾಶ್ ಬ್ಯಾಡ್ಮಿಂಟನ್ ಅಕಾಡೆಮಿ ಅವರು ಆಯೋಜಿಸಿದ ಸುಧಾನ ಪ್ರೀಮಿಯರ್ ಲೀಗ್ 2024 ಇದರ ಮೂರನೇ ಆವೃತ್ತಿಯ ಪಂದ್ಯಾಟದಲ್ಲಿ ಚಾಂಪಿಯನ್ ಪಟ್ಟವನ್ನು ರಾಜೇಶ್ವರಿ ಆಚಾರ್ಯ ಮಾಲಕತ್ವದ ಸುಳ್ಯದ ಆಟಗಾರರು ಭಾಗವಹಿಸಿದ ಶಟಲ್ ವಾರಿಯರ್ಸ್ ತಂಡ ಪಡೆದುಕೊಂಡಿದೆ.

ಸುಮಾರು ನಾಲ್ಕು ತಂಡಗಳು ಭಾಗವಹಿಸಿದ ಲೀಗ್ ಮಾದರಿಯ ಪಂದ್ಯಾಟದಲ್ಲಿ ರೋಚಕ ಪಂದ್ಯಗಳು ನಡೆಯಿತು.
ಸುಳ್ಯದ ಬ್ಯಾಡ್ಮಿಂಟನ್ ಆಟಗಾರರಾದ ನೌಶಾದ್,ಶಂಸುದ್ದೀನ್, ಸಿರಾಜುದ್ದೀನ್, ನಾಸಿರ್ ಕಟ್ಟೆಕ್ಕಾರ್ಸ್, ಚೇತನ್, ಇಂಚರ ಪಾಲ್ಗೊಂಡಿದ್ದರು.