ಬೆಳ್ಳಾರೆಯ ವೀಕ್ಷಾ ನಾಗರಾಜ್ ಐ.ಐ.ಟಿ.ಗೆ ಪ್ರವೇಶ

0

ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ ಹಿರಿಯ ವಿದ್ಯಾರ್ಥಿನಿ ಬೆಳ್ಳಾರೆ ಗ್ರಾಮದ ವೀಕ್ಷಾ ನಾಗರಾಜ್ ಐ.ಐ.ಟಿ.ಗೆ ಪ್ರವೇಶಾವಕಾಶ ಪಡೆದಿದ್ದಾರೆ.


ಲೂಡ್ಸ್ ( Lourdes) ಸೆಂಟ್ರಲ್ ಸ್ಕೂಲ್ ಮಂಗಳೂರಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿ ಜೆ.ಇ.ಇ ಮೈನ್ಸ್ ಪರೀಕ್ಷೆ ಬರೆದು ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆದು ಬಳಿಕ ಪರೀಕ್ಷೆ ಬರೆದು ಪಡೆದ ರ್ಯಾಂಕ್ ಆಧಾರದಲ್ಲಿ ಇಂಡಿಯನ್ ಇಸ್ಟಿಟ್ಯೂಟ್ ಟೆಕ್ನಾಲಜಿಗೆ (I I T) ಗೆ ಪ್ರವೇಶಾವಕಾಶ ಪಡೆದಿದ್ದಾರೆ.


ಇವರು ಮೈಸೂರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ನಾಗರಾಜ್ ಮತ್ತು ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶ್ರೀಮತಿ ಶಕುಂತಳಾ ನಾಗರಾಜ್ ದಂಪತಿ ಪುತ್ರಿ.