ಸುಳ್ಯ : ತಾಲೂಕಿನ ಒಕ್ಕೂಟದ ಅಧ್ಯಕ್ಷರುಗಳ ಕೇಂದ್ರ ಸಮಿತಿಯ ಸಭೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸುಳ್ಯ ತಾಲೂಕಿನ ಒಕ್ಕೂಟ ಅಧ್ಯಕ್ಷರುಗಳ ಸಭೆಯನ್ನು ಕೇಂದ್ರ ಸಮಿತಿಯ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕರವರ ಅಧ್ಯಕ್ಷತೆಯಲ್ಲಿ ಸುಳ್ಯ ಯೋಜನಾ ಕಛೇರಿಯ ಸಭಾಂಗಣದಲ್ಲಿ ನಡೆಯಿತು.

ಕರಾವಳಿ ಪ್ರಾದೇಶಿಕ ವ್ಯಾಪ್ತಿಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ದುಗ್ಗೇಗೌಡರವರು ದೀಪ ಬೆಳಗಿಸಿ ಉದ್ಘಾಟನೆಯನ್ನು ಮಾಡಿ ಮಾತನಾಡುತ್ತ, ಗ್ರಾಮಾಭಿವೃಧ್ಧಿ ಯೋಜನೆಯು 1982 ರಲ್ಲಿ ಆರಂಭವಾಗಿದ್ದು, ಯೋಜನೆಯ ಪ್ರಾರಂಭಕ್ಕೆ ಮೊದಲು ಸದಸ್ಯನ ಸ್ಥಿತಿ ಗತಿ ಹೇಗೆ ಇತ್ತು. ಅದೇ ಸದಸ್ಯನ ಪ್ರಸ್ತುತ ಸ್ಥಿತಿಗತಿಯನ್ನು ಗಮನಿಸಿದರೆ ತುಂಬಾ ಪ್ರಗತಿಯನ್ನು ಹೊಂದಿದ್ದಾರೆ.

ಒಕ್ಕೂಟದ ಅಧ್ಯಕ್ಷರುಗಳು ಜವಾಬ್ದಾರಿಯುತವಾಗಿ ಸೇವೆಯನ್ನು ಮಾಡಿದಾಗ ಆ ಒಕ್ಕೂಟದ ಸದಸ್ಯರ ಕುಟುಂಬ ಮತ್ತು ಸಮುದಾಯವು ಪ್ರಗತಿ ಹೊಂದಲು ಸಾಧ್ಯವಿದೆ. ಯೋಜನೆಯು ಬಿ.ಸಿ ಟ್ರಸ್ಟ್ ಆಗಿದ್ದು, ಟ್ರಸ್ಟ್ ಮತ್ತು ಬ್ಯಾಂಕ್ ಗೆ ಇರುವ ವ್ಯತ್ಯಾಸದ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಅಧ್ಯಕ್ಷರುಗಳು ತಮ್ಮ ಒಕ್ಕೂಟಕ್ಕೆ ಯಾವುದೇ ಸಮಸ್ಯೆಗಳು ಎದುರಾಗದಂತೆ ಒಮ್ಮತದಿಂದ ಸೇವೆ ಸಲ್ಲಿಸಬೇಕೆಂದು ಪ್ರೇರಣೆಯ ಮಾತನ್ನು ಹೇಳಿದರು.


ಈ ಸಂದರ್ಭದಲ್ಲಿ 2023-24 ನೇ ಸಾಲಿನಲ್ಲಿ ವಿವಿಧ ವಿಷಯಗಳಲ್ಲಿ ಸಾಧನೆ ಮಾಡಿದ ಒಕ್ಕೂಟಗಳನ್ನು ಗುರುತಿಸಲಾಯಿತು.ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆ 2 ರ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ರವರು, ಎಲ್ಲಾ ವಲಯದ ಒಕ್ಕೂಟಗಳ ವಲಯಾಧ್ಯಕ್ಷರುಗಳು ಉಪಸ್ಥಿತರಿದ್ದರು.

ಈ ಸಭೆಯಲ್ಲಿ ತಾಲೂಕಿನ ಎಲ್ಲಾ ಒಕ್ಕೂಟದ ಅಧ್ಯಕ್ಷರುಗಳು, ಎಲ್ಲಾ ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು, ಆಂತರಿಕ ಲೆಕ್ಕ ಪರಿಶೋಧಕರು ಭಾಗವಹಿಸಿದರು.ಈ ಕಾರ್ಯಕ್ರಮವನ್ನು ತಾಲೂಕಿನ ಕ್ಷೇತ್ರ ಯೋಜನಾಧಿಕಾರಿಯವರಾದ ಮಾಧವರವರು ಸ್ವಾಗತಿಸಿದರು. ಗುತ್ತಿಗಾರು ಮೇಲ್ವಿಚಾರಕರಾದ ಬಾಲಕೃಷ್ಣ ಗೌಡರವರು ಕಾರ್ಯನಿರೂಪಿಸಿದರು.