ಹಳೆಗೇಟು : ಬೆಟ್ಟಂಪಾಡಿ ಬಳಿ ತಡೆಗೋಡೆ ಬಿದ್ದು ಪಕ್ಕದ ಮನೆಗೆ ಹಾನಿ

0


ಕಳೆದ 2-3 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಹಳೆಗೇಟು ಬೆಟ್ಟಂಪಾಡಿ ಸಮೀಪ ಮನೆಯ ತಡೆಗೋಡೆ ಬಿದ್ದು ಪಕ್ಕದ ಮನೆಯ ಗೋಡೆಗೆ ಹಾನಿಯಾದ ಘಟನೆ ಜು.14ರಂದು ರಾತ್ರಿ ಸಂಭವಿಸಿದೆ.

ಮಹಮ್ಮದ್ ಮಂಡೆಕೋಲು ಎಂಬುವವರ ಮನೆಯ ಹಿಂಬದಿಯ ತಡೆಗೋಡೆ ಕೆಳಭಾಗದಿಂದಲೇ ಜರಿದು ಬಿದ್ದು ಕಲ್ಲುಗಳು ಸ್ಥಳೀಯ ನಿವಾಸಿ ಆಮೀನ ಎಂಬುವವರ ಮನೆಯ ಗೋಡೆಗೆ ಬಂದು ಬಿದ್ದ ಕಾರಣ ಮನೆಯ ಗೋಡೆ ಬಿರುಕು ಬಿಟ್ಟಿದೆ. ಘಟನೆಯಿಂದ ಬೇರೆ ಯಾವುದೇ ಅಪಾಯ ಸಂಭವಿಸಿಲ್ಲ ಎನ್ನಲಾಗಿದೆ.