ಮಂಡೆಕೋಲು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿ ಸುರೇಶ್ ಕಣೆಮರಡ್ಕ

0

ಮಂಡೆಕೋಲು ಸ‌.ಉ. ಹಿ.ಪ್ರಾ. ಶಾಲಾ ಎಸ್.ಡಿ.ಎಂ.ಸಿ. ನೂತನ ಅಧ್ಯಕ್ಷರಾಗಿ ಸುರೇಶ್ ಕಣೆಮರಡ್ಕ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಮಂಜುಳಾ ಮಿತ್ತಿಲ, ಸದಸ್ಯರುಗಳಾಗಿ ಕಮಲ, ರಶ್ಮಿ, ಚಂದ್ರ ಪೆರಾಜೆ, ಶಂಕರ, ಪುರುಷೋತ್ತಮ ಬೇಂಗತ್ತಮಲೆ, ಅಚ್ಚುತ ಒಡಂಬಳೆ, ಭಾರತಿ ಯು.ಎಂ., ರೇಖಾ, ಪಿ.ಎ. ರಝಾಕ್, ದಾಮೋದರ, ಸಂತೋಷ್, ಉಪೇಂದ್ರ ಆಚಾರ್ಯ, ಶಶಿಕಲಾ, ಶೋಭಾ, ಗೀತಾ, ಜಯಶ್ರೀ ಆಯ್ಕೆಯಾದರು.

ಆ.5ರಂದು ಶಾಲೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರಕಾಶ್ ಕಣೆಮರಡ್ಕ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಶ್ರೀಮತಿ ಪ್ರಶಾಂತಿ, ಮುಖ್ಯಗುರುಗಳಾದ ಮಂಜುಳಾ ಎಂ.ಎಸ್. ಉಪಸ್ಥಿತರಿದ್ದರು.

ಶಿಕ್ಷಕ ಮಧುಸೂದನ್ ಸ್ವಾಗತಿಸಿ, ಶಿಕ್ಷಕಿ ವನಿತಾ ವಂದಿಸಿದರು.