ಅರಂಬೂರು: ಶ್ರೀ ಕೃಷ್ಣ ಜನ್ಮಾಷ್ಠಮಿ ಮತ್ತು ಗಣೇಶೋತ್ಸವದ ಆಮಂತ್ರಣ ಬಿಡುಗಡೆ

0

ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದ ವಠಾರದಲ್ಲಿ ಆ.26 ಮತ್ತು ಸೆ. 7 ರಂದು ನಡೆಯಲಿರುವ ಶ್ರೀ ಕೃಷ್ಣ ಜನ್ಮಾಷ್ಠಮಿ ಮತ್ತು
ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರ ಬಿಡುಗಡೆಯು ಆ‌.10 ರಂದು ಭಜನಾಮಂದಿರದ ಲ್ಲಿ ನಡೆಯಿತು.

ಅರ್ಚಕ ಅಭಿರಾಮ್ ಭಟ್ ರವರು ಪ್ರಾರ್ಥನೆ ನೆರವೇರಿಸಿದರು. ಮಂದಿರದ ಗೌರವಾಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಂದಿರದ ಅಧ್ಯಕ್ಷ ರತ್ನಾಕರ ರೈ ಅರಂಬೂರು, ನಿಕಟ ಪೂರ್ವ ಅಧ್ಯಕ್ಷ ಕೆ.ಕೃಷ್ಣಪ್ಪ ಗೌಡ ಅರಂಬೂರು, ಪದ್ಮಯ್ಯ ಗೌಡಪಡ್ಪು,ಗುರುಪ್ರಸಾದ್ ಕುಡೆಕಲ್ಲು, ಪ್ರೀತಿಕ್ ಕುಲಾಲ್ ಅರಂಬೂರು ಹಾಗೂ ಮಂದಿರದ ಸಮಿತಿಯಪದಾಧಿಕಾರಿಗಳುಮತ್ತುಸದಸ್ಯರು,ಅಂಬಿಕಾ ಮಹಿಳಾ ಮಂಡಲದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.