ತಾಲೂಕು ಭಜನಾ ಪರಿಷತ್ ವಾರ್ಷಿಕ ಸಭೆ

0

ಸಂಪಾಜೆ ವಲಯದಲ್ಲಿ ಭಜನೋತ್ಸವ ನಡೆಸಲು ತೀರ್ಮಾನ

ಸುಳ್ಯ ತಾಲೂಕು ಮಂಜುನಾಥೇಶ್ವರ ಭಜನಾ ಪರಿಷತ್ ಇದರ ವಾರ್ಷಿಕ ಸಭೆಯು ಯೋಜನಾಧಿಕಾರಿ ಕಚೇರಿ ಸಭಾಭವನದಲ್ಲಿ ಆ.11 ರಂದು ನಡೆಯಿತು.

ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಯತೀಶ್ ರೈ ದುಗಲಡ್ಕ
ಅಧ್ಯಕ್ಷತೆ ವಹಿಸಿದ್ದರು.

ವಲಯ ಮಟ್ಟದ ಭಜನಾ ಪರಿಷತ್ ನ ಸಭೆಗಳನ್ನು ನಡೆಸಿ ಪದಾಧಿಕಾರಿಗಳ ಆಯ್ಕೆ ಮಾಡಬೇಕು. ಪ್ರಸ್ತುತ ವರ್ಷದ ಧರ್ಮಸ್ಥಳದಲ್ಲಿ ನಡೆಯುವ ಭಜನಾ ಕಮ್ಮಟಕ್ಕೆ ತಾಲೂಕಿನ ಪ್ರತಿ ವಲಯದಿಂದ ಒಂದು ಭಜನಾ ಮಂಡಳಿಯಿಂದ 2 ಮಂದಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಳುಹಿಸುವುದು. ಪ್ರಸ್ತುತ ವರ್ಷದ ತಾಲೂಕು ಮಟ್ಟದ 2024 ರ ಭಜನೋತ್ಸವವನ್ನು ಸಂಪಾಜೆ ವಲಯದಲ್ಲಿ ನಡೆಸುವ ಕುರಿತು ತೀರ್ಮಾನಿಸಲಾಯಿತು.
ಮುಂದಿನ ತಿಂಗಳಲ್ಲಿ ಭಜನೋತ್ಸವ ಸಮಿತಿಯನ್ನು ಆಯಾ ಪ್ರದೇಶದಲ್ಲಿ ರಚಿಸುವುದಾಗಿ ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿ ಮಂಜುನಾಥೇಶ್ವರ ಭಜನಾ ಪರಿಷತ್ ಇದರ ನಿಕಟ ಪೂರ್ವ ರಾಜ್ಯಾಧ್ಯಕ್ಷ ಬಾಲಕೃಷ್ಣ ಪುತ್ಯ, ಯೋಜನಾಧಿಕಾರಿ ಮಾಧವ, ತಾಲೂಕು ಭಜನಾ ಪರಿಷತ್ ಗೌರವಾಧ್ಯಕ್ಷ ವಿಶ್ವನಾಥ ರೈ ಅರ್ಗುಡಿ, ತಾಲೂಕು ಭಜನಾ ಪರಿಷತ್ ಉಪಾಧ್ಯಕ್ಷ ಚಂದ್ರಶೇಖರ ತೋಟ ಬೆಳ್ಳಿಪ್ಪಾಡಿ, ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಸತೀಶ್ ಟಿ. ಎನ್, ಕೋಶಾಧಿಕಾರಿ ಮಹೇಶ್ ಮೇರ್ಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕಿನ ಭಜನಾ ಪರಿಷತ್ ನ ನಿರ್ದೇಶಕರುಗಳು, ವಲಯ ಭಜನಾ ಪರಿಷತ್ ನ ಅಧ್ಯಕ್ಷರು, ಪದಾಧಿಕಾರಿಗಳು, ತಾಲೂಕಿನ ಭಜನಾ ಮಂಡಳಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರುಗಳು, ಎಲ್ಲಾ ವಲಯಗಳ ಮೇಲ್ವಿಚಾರಕರು ಭಾಗವಹಿಸಿದರು. ಜಾಲ್ಸೂರು ವಲಯ ಮೇಲ್ವಿಚಾರಕ ತೀರ್ಥರಾಮ ಸ್ವಾಗತಿಸಿದರು. ನಿಂತಿಕಲ್ಲು ವಲಯ ಮೇಲ್ವಿಚಾರಕಿ ಹೇಮಲತಾ ವಂದಿಸಿದರು. ಗುತ್ತಿಗಾರು ವಲಯ ಮೇಲ್ವಿಚಾರಕ ಬಾಲಕೃಷ್ಣ ಗೌಡ .ಕೆ ಕಾರ್ಯಕ್ರಮ ನಿರೂಪಿಸಿದರು.