ಕೃಷಿ ಪಂಪ್ ಸೆಟ್ಟ್ ಗಳ ಆರ್.ಆರ್. ನಂಬರಿಗೆ ಆಧಾರ್ ಜೋಡನೆ : ಆ.25 ಕೊನೆಯ ದಿನ

0

ಆ.24 ಮತ್ತು 25 ರಜಾ ದಿನವಾದರೂ ಆಧಾರ್ ಜೋಡನೆಗೆ ಅವಕಾಶ ಕಲ್ಪಿಸಿದ ಇಲಾಖೆ

ಕರ್ನಾಟಕ ಸರಕಾರದ ಆದೇಶದಂತೆ ಕೃಷಿ ಪಂಪ್ ಸೆಟ್ಟುಗಳ ಆರ್ ಆರ್ ನಂಬರಿಗೆ ಆಧಾರ್ ಜೋಡಣೆ ಮಾಡಬೇಕಾಗಿರುತ್ತದೆ. ಸುಳ್ಯ ಮತ್ತು ಸುಬ್ರಹ್ಮಣ್ಯ ಉಪವಿಭಾಗ ವ್ಯಾಪ್ತಿಯ ಕೃಷಿಕರ ಆರ್ ಆರ್ ನಂಬರಿಗೆ ಆಧಾರ್ ನಂಬರ್ ಜೋಡಣೆ ಮತ್ತು ಹೆಸರು ಬದಲಾವಣೆ 25.08.24 ಕೊನೆಯ ದಿನವಾಗಿದ್ದು ಆ.24 ಮತ್ತು ಆ.25 ರಂದು ರಜಾ ದಿನ ಆದರೂ ನೋಂದಾವಣಾ ಪ್ರಕ್ರಿಯೆ ನಡೆಯುತ್ತದೆ. ಕೃಷಿಕರು ಇದರ ಸದುಪಯೋಗ ಪಡೆಯಬಹುದು.‌ಸುಳ್ಯ, ಬೆಳ್ಳಾರೆ, ಪಂಜ, ಅರಂತೋಡು ಹೀಗೆ ಎಲ್ಲಾ ಶಾಖೆಗಳಲ್ಲಿಯೂ ನೋಂದಾವಣೆ ಅವಕಾಶವಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಬೇಕಾದ ದಾಖಲೆಗಳು
1.ಆಧಾರ್ ಜೆರಾಕ್ಸ್
2.RTC

  1. ಪಂಪ್ ಸೆಟ್ RR ನಂಬರ್
  2. ⁠death/ಸೇಲ್ ಡೆಡ್ ಕಾಪಿ
  3. ⁠ರೇಷನ್ ಕಾರ್ಡ್
  4. ⁠ಫೋಟೋ ಎಂದು ಸಮಿತಿಯವರು ವಿನಂತಿಸಿದ್ದಾರೆ.