ವರ್ಷಿತ್ ಎಂ.ಎನ್. ಸಿಂಗಾಪುರದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆ

0

ಮೈಸೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಹಿಟೋರಿಯೋ ಕರಾಟೆ ಸ್ಪರ್ಧೆಯ ಕುಮಿಟೆ ವಿಭಾಗದಲ್ಲಿ ವರ್ಷಿತ್ ಎಂ.ಎನ್. ಪ್ರಥಮ ಸ್ಥಾನವನ್ನು ಪಡೆದು ಅಂತರಾಷ್ಟ್ರೀಯ  ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಚಂದ್ರಶೇಖರ ಕನಕಮಜಲುರವರ ಶಿಷ್ಯ. ಕೆವಿಜಿ ಐಪಿಎಸ್ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ.  ಡಿಸೆಂಬರ್  2ನೇ ತಾರೀಖಿನಂದು ಸಿಂಗಾಪುರದಲ್ಲಿ  ನಡೆಯುವ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಇವರು  ಮಂಡೆಕೋಲು ಗ್ರಾಮದ  ವಸಂತ ಕುಮಾರ್ ಮೀನಗದ್ದೆ ಮತ್ತು ಶ್ರೀಮತಿ ಜಯಶ್ರೀ ವಸಂತರವರ ಪುತ್ರ.