ರಾಜ್ಯಾಧ್ಯಕ್ಷ ಬಾಲಕೃಷ್ಣ ಪುತ್ಯ ಉಪಸ್ಥಿತಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸುಳ್ಯ ತಾಲೂಕು ಅಜ್ಜಾವರ ವಲಯದ ಭಜನಾ ಪರಿಷತ್ ಸುಳ್ಯ ತಾಲೂಕು ಅಜ್ಜಾವರ ವಲಯ ಇದರ ಸಭೆಯನ್ನು ಶ್ರೀ ಶಂಕರ ಭಾರತಿವೇದ ಪಾಠಶಾಲೆ ಬಯಂಬುವಿನಲ್ಲಿ ನಡೆಯಿತು.
ರಾಜ್ಯ ಭಜನಾ ಪರಿಷತ್ ಅಧ್ಯಕ್ಷರಾದ ಬಾಲಕೃಷ್ಣ ಪುತ್ಯ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ತಾಲೂಕು ಭಜನಾ ಪರಿಷತ್ತಿನ ನಿರ್ದೇಶಕರಾದ ದಯಾನಂದ ಕೊರತ್ತೋಡಿ ಮಾತನಾಡಿ ಸೆಪ್ಟೆಂಬರ್ 22 ರಿಂದ ಸೆಪ್ಟೆಂಬರ್ 29ರವರೆಗೆ ಧರ್ಮಸ್ಥಳ ದಲ್ಲಿ ನಡೆಯುವ ಭಜನಾ ಕಮ್ಮಟದ ತರಬೇತಿ ಹಾಗೂ ಮಂಗಳೊತ್ಸವ ಕಾರ್ಯಕ್ರಮದಲ್ಲಿ ವಲಯದಿಂದ ಆಸಕ್ತ ಅಭ್ಯರ್ಥಿಗಳನ್ನು ಕಳುಹಿಸಿಕೊಡುವ ಕುರಿತು ಮತ್ತು ಮಂಗಳೋತ್ಸವದಲ್ಲಿ ಪಾಲ್ಗೊಳ್ಳುವಂತೆ ಹಾಗೂ ಸಂಪಾಜೆ ವಲಯದಲ್ಲಿ ನಡೆಯುವ ಭಜನೋತ್ಸವ ಕಾರ್ಯಕ್ರಮದಲ್ಲಿ ಭಜನಾ ಮಂಡಳಿಗಳು ಭಾಗವಹಿಸುವ ಕುರಿತು ಮಾಹಿತಿಯನ್ನು ನೀಡಿದರು.
ಬಳಿಕ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಸುರೇಶ್ ಕಣೆಮರಡ್ಕ ಮಾತನಾಡಿ ಭಜನೆ ಯ ಮಹತ್ವ, ಯುವ ಪೀಳಿಗೆಗೆ ಅವಶ್ಯಕ ವಾಗಬೇಕು. ಕಮ್ಮಟದಲ್ಲಿ ಪಾಲ್ಗೊಳ್ಳಬೇಕು ಎಂದರು.
ಭಜನಾ ಪರಿಷತ್ ನಿಕಟ ಪೂರ್ವ ರಾಜ್ಯಾಧ್ಯಕ್ಷರು ಬಾಲಕೃಷ್ಣ ಪುತ್ಯ ರವರು ಮಾತನಾಡಿ, ವಲಯದಿಂದ 4 ಮಂದಿ ಸಾಧಕ ಪ್ರಶಸ್ತಿ ಗೆ ಹಿರಿಯ ಭಜಕರ ಬಯೋಡೇಟ ವನ್ನು 2 ದಿನದಲ್ಲಿ ನೀಡುವಂತೆ ತಿಳಿಸಿದರು.
ಅಜ್ಜಾವರ ವಲಯದ ಭಜನಾ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ದೊಡ್ಡೇರಿ ಮಾತನಾಡಿ ಭಜನೆಯ ಮಹತ್ವ, ಮುಂದಿನ ದಿನ ವಲಯದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಬಗ್ಗೆ ಹಾಗೂ ಅಜ್ಜಾವರ ವಲಯದಿಂದ ಭಜನೋತ್ಸವ ಕಾರ್ಯಕ್ರಮ ದಲ್ಲಿ ಎಲ್ಲಾ ಭಜನಾ ತಂಡಗಳು ಭಾಗವಹಿಸುವಂತೆ ತಿಳಿಸಿದರು.
ವಲಯದ ಭಜನೆ ಪರಿಷತ್ ಕಾರ್ಯದರ್ಶಿ ಸಂಧ್ಯಾ ಮಂಡೆಕೋಲು ಭಜನೆ ಕಮ್ಮಟಕೆ ಹೋದ ಬಗ್ಗೆ ಅನುಭವವನ್ನೂ ಹಂಚಿಕೊಂಡರು.
ಮೇಲ್ವಿಚಾರಕಿ ಕಾಂತಿಕಾಮಣಿ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ವಲಯದ ಭಜನಾ ಮಂಡಳಿಯ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ವಲಯದ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಅವರು ಉಪಸ್ಥಿತರಿದ್ದರು.