ಶಿಕ್ಷಕರ ದಿನಾಚರಣೆ ಪ್ರಯುಕ್ತ ರೋಟರಿ ಮಡಿಕೇರಿ ವುಡ್ಸ್ ಸಂಸ್ಥೆ ವತಿಯಿಂದ ಕೊಡ ಮಾಡುವ ನೇಶನ್ ಬಿಲ್ಡರ್ ಅವಾರ್ಡ್ ಗೆ ಭಾಗಮಂಡಲ ಕೆ.ವಿ.ಜಿ. ಐಟಿಐ ಯ ಕಿರಿಯ ತರಬೇತಿ ಅಧಿಕಾರಿ ಪದ್ಮಕುಮಾರ್ ರೈಯವರು ಭಾಜನರಾಗಿದ್ದಾರೆ.
ಇತ್ತೀಚಿಗೆ ಮಡಿಕೇರಿಯಲ್ಲಿ ನಡೆದ ರೋಟರಿ ಕ್ಲಬ್ ಸಭೆಯಲ್ಕಿ ಪದ್ಮಕುಮಾರ್ ರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪದ್ಮಕುಮಾರ್ ರೈಯವರು ಉಬರಡ್ಕ ಮಿತ್ತೂರು ಗ್ರಾಮದ ಸೂಂತೋಡು ಶಾಂತಪ್ಪ ರೈಯವರ ಪುತ್ರ. ಕಳೆದ 21 ವರ್ಷಗಳಿಂದ ಭಾಗಮಂಡಲ ಕೆ.ವಿ.ಜಿ. ಐಟಿಐಯಲ್ಲಿ ಕಿರಿಯ ತರಬೇತಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.