ಅನ್ಸಾರ್ ನಲ್ಲಿ ಗ್ರ್ಯಾಂಡ್ ಮೌಲಿದ್ ಹಾಗೂ ದುವಾ ಮಜ್ಲಿಸ್

0


ಸುಳ್ಯ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಇದರ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ರಬಿಯುಲವ್ವಲ್ ಮೌಲೂದ್ ಹಾಗೂ ದುವಾ ಮಜ್ಲಿಸ್ ಕಾರ್ಯಕ್ರಮ ಅನ್ಸಾರ್ ಸಭಾಂಗಣದಲ್ಲಿ ನಡೆಯಿತು.
ಮೌಲೂದ್ ಕಾರ್ಯಕ್ರಮವನ್ನು ಗಾಂಧಿನಗರ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಕಾಮಿಲ್ ಸಖಾಫಿ ಉದ್ಘಾಟಿಸಿದರು.
ಗಾಂಧಿನಗರ ಮದರಸ ಸದರ್ ಸಿರಾಜುದ್ದೀನ್ ಸಹದಿ,ಅನ್ಸಾರಿಯಾ ಮುದರಿಸ್ ಅಬೂಭಕ್ಕರ್ ಹಿಮಮಿ ಸಖಾಫಿ, ಅನ್ಸಾರಿಯಾ ಖತೀಬರಾದ ಹಾಪಿಳ್ ಹಾಮಿದ್ ಸಖಾಫಿ,ಹುಸೈನ್ ತಂಙಳ್,ಪೈಝಲ್ ಝುಹರಿ,ಅಡ್ವಕೇಟ್ ಅಬ್ದುಲ್ಲಾ ಹಿಮಮಿ, ಲತೀಫ್ ಸಖಾಫಿ ಗೂನಡ್ಕ,ರವೂಫ್ ಝುಹರಿ,ಹಂಝತ್ತುಲ್ ಕರ್ರರ್ ಮುಹಿನಿ,ಮೌಲೂದ್ ನೇತ್ರತ್ವ ವಹಿಸಿದರು.

ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್ ಅಧ್ಯಕ್ಷತೆ ವಹಿಸಿದರು.
ಗಾಂಧಿನಗರ ಜಮಾಯತ್ ಕಮಿಟಿ ಅಧ್ಯಕ್ಷ ಹಾಜಿ ಮಹಮ್ಮದ್ ಕೆಎಂಎಸ್ ಅನ್ಸಾರ್ ಮಾಜಿ ಅಧ್ಯಕ್ಷರುಗಳಾದ ಹಾಜಿ ಅಬ್ದುಲ್ ಶುಕೂರ್,ಹಾಜಿ ಅಬ್ದುಲ್‌ ಗಫಾರ್,ಹಾಜಿ ಹಮೀದ್ ಜನತಾ,ಹಾಜಿ ಕೆಎಂ ಮುಸ್ತಫಾ,ಆದಂ ಹಾಜಿ ಕಮ್ಮಾಡಿ, ಸಲಹಾ ಸಮಿತಿ ಸದಸ್ಯರಾದ ಕೆಬಿ ಮಹಮ್ಮದ್ ಹಾಜಿ, ಹಾಜಿ ಉಮ್ಮರ್ ಮೆಟ್ರೋ,ಜಯ್ಯಂತ್ತುಲ್ ಪಲಾಹ್ ಅಧ್ಯಕ್ಷ ಅಬೂಭಕ್ಕರ್ ಪಾರೆಕ್ಕಾಲ್,ಮಾಜಿ ಅಧ್ಯಕ್ಷ ಹಸೈನಾರ್ ಹಾಜಿ ಗೋರಡ್ಕ,ಅನ್ಸಾರಿಯಾ ಅಧ್ಯಕ್ಷ ಅಬ್ದುಲ್‌ ಮಜೀದ್ ಜನತಾ,ಮೊದಲಾದವರು ಉಪಸ್ಥಿತರಿದ್ದರು.
ಅನ್ಸಾರ್ ಪ್ರಧಾನ ಕಾರ್ಯದರ್ಶಿ ಹನೀಫ್ ಬಿಎಂ ಸ್ವಾಗತಿಸಿ ಕಾರ್ಯದರ್ಶಿ ಸಂಶುದ್ದೀನ್ ಕಾರ್ಯಕ್ರಮ ನಿರೂಪಿಸಿದರು.