ಕೊಡಗು ಸಂಪಾಜೆ ಪೊಲೀಸ್ ಉಪ ಠಾಣಾ ಎ.ಎಸ್.ಐ. ಸುಂದರ ಸುವರ್ಣ ಮಡಿಕೇರಿಗೆ ವರ್ಗಾವಣೆ

0

ಸಂಪಾಜೆ ಉಪಠಾಣೆಗೆ ಎ.ಎಸ್.ಐ. ಆಗಿ ಮಡಿಕೇರಿಯ ಫ್ರಾನ್ಸಿಸ್ ಆಗಮನ

ಕೊಡಗು ಸಂಪಾಜೆ ಪೊಲೀಸ್ ಉಪಠಾಣೆಯಲ್ಲಿ ಎ.ಎಸ್.ಐ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಂದರ ಸುವರ್ಣ ಅವರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ಎ.ಎಸ್.ಐ. ಆಗಿ ವರ್ಗಾವಣೆಯಾಗಿದ್ದು, ಸಂಪಾಜೆ ಉಪಠಾಣೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ. ಆಗಿ ಕರ್ತವ್ಯದಲ್ಲಿದ್ದ ಫ್ರಾನ್ಸಿಸ್ ಜಿ. ಅವರು ಆಗಮಿಸಿದ್ದಾರೆ.

ಸುಂದರ ಸುವರ್ಣರಿಗೆ ಪೊಲೀಸ್ ಉಪಠಾಣೆಯ ವತಿಯಿಂದ ಬೀಳ್ಕೊಡುಗೆ ಸಮಾರಂಭವು ಅ.1ರಂದು ಜರುಗಿತ್ತು.
ಸಂಪಾಜೆಗೆ ಆಗಮಿಸಿರುವ ಫ್ರಾನ್ಸಿಸ್ ಅವರು ಮೂಲತಃ ಮಡಿಕೇರಿಯವರಾಗಿದ್ದಾರೆ.