ಸುಳ್ಯ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಶಾಲಾ ಆವರಣದಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿಯವರ ಜನ್ಮದಿನವನ್ನು ಅ.2 ರಂದು ಆಚರಿಸಲಾಯಿತು. ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಫಾದರ್ ವಿಕ್ಟರ್ ಡಿಸೋಜ, ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ಪೋಷಕ ಸಂಘದ ಉಪಾಧ್ಯಕ್ಷರುಗಳಾದ ಹೇಮನಾಥ ಬಿ ಹಾಗೂ ಶಶಿಧರ ಎಂ ಜೆ, ಶಾಲಾ ಶಿಕ್ಷಕ ಕಾರ್ಯದರ್ಶಿಯರಾದ ಶ್ರೀಮತಿ ದೇವಿಲತಾ ಹಾಗೂ ಶ್ರೀಮತಿ ಜ್ಯೋತಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿಯವರ ಭಾವಚಿತ್ರಗಳಿಗೆ ಪುಷ್ಪಾರ್ಚನೆಗಳನ್ನು ಮಾಡಿ ಗೌರವಿಸಿದರು.
ಈ ದಿನದ ಪ್ರಮುಖ ಅಂಗವಾಗಿ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳಿಂದ ಹಾಗೂ ಶಿಕ್ಷಕರಿಂದ ಸರ್ವಧರ್ಮ ಪ್ರಾರ್ಥನೆ ಮೂಡಿ ಬಂತು. 5ನೇ ತರಗತಿಯ ವಿದ್ಯಾರ್ಥಿಗಳು ಸಮೂಹ ದೇಶಭಕ್ತಿ ಗೀತೆಯನ್ನು ಹಾಡಿದರು. ಮಾ.ವಿಹಾನ್ ಜೈನ್ 5ನೇ ತರಗತಿ ಗಾಂಧೀಜಿಯ ಕುರಿತು ಭಾಷಣ ಮಾಡಿದರು. ಪ್ರೌಢಶಾಲಾ ಪೋಷಕ ಉಪಾಧ್ಯಕ್ಷರಾದ ಹೇಮನಾಥ ಬಿ ಗಾಂಧೀಜಿಯ ಆದರ್ಶ ತತ್ವಗಳನ್ನು ಇಂದಿನ ಮಕ್ಕಳು ಮೈಗೂಡಿಸಿಕೊಳ್ಳಬೇಕೆಂದು ತಮ್ಮ ಮಾತುಗಳಲ್ಲಿ ಹೇಳಿದರು. ಗಾಂಧೀಜಿ ಹಾಗೂ ಸ್ವಚ್ಛತೆಯ ಕುರಿತು ವಿದ್ಯಾರ್ಥಿ ಸುಜಿವ್ ಪಿ 5ನೇ ತರಗತಿ ಘೋಷಣೆಗಳನ್ನು ಹೇಳಿದನು. ಮುಖ್ಯೋಪಾಧ್ಯಾಯನಿ ಸಿಸ್ಟರ್ ಮೇರಿ ಸ್ಟೆಲ್ಲಾ ಗಾಂಧಿ ಜಯಂತಿಯ ಶುಭಾಶಯಗಳನ್ನು ಕೋರಿದರು.
ಸಭಾಧ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾಲಕರು ವಂದನೀಯ ಗುರುಗಳಾದ ಫಾದರ್ ವಿಕ್ಟರ್ ಡಿಸೋಜರವರು ವಿದ್ಯಾರ್ಥಿಗಳಿಗೆ ಗಾಂಧೀಜಿಯ ಸರಳ ಸ್ವಭಾವ ಹಾಗೂ ಚಿಂತನೆಗಳ ಬಗ್ಗೆ ಮನಮುಟ್ಟುವಂತೆ ಮಾತನಾಡಿ ಎಲ್ಲರನ್ನೂ ಶುಭ ಹಾರೈಸಿದರು.
5ನೇ ತರಗತಿ ವಿದ್ಯಾರ್ಥಿನಿ ವೃಷ್ಠಿ ವಿ ಆಳ್ವ ಸ್ವಾಗತಿಸಿ,5 ನೇ ತರಗತಿಯ ವಿದ್ಯಾರ್ಥಿ ಮೋಹಿತ್ ಗೌಡ ಎಂ ಪಿ ವಂದಿಸಿದರು. ಪ್ರಣಮ್ಯ ಕೆ 5ನೇ ತರಗತಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.
ಗಾಂಧಿ ಜಯಂತಿಯ ಅಂಗವಾಗಿ ಶಾಲಾ ಆವರಣದಿಂದ ಜ್ಯೋತಿ ವೃತ್ತದ ವರೆಗೆ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಶಿಕ್ಷಕರಿಂದ ಶುಚಿತ್ವದ ಕಾರ್ಯ ನಡೆಯಿತು. ಆಗಮಿಸಿದ ಸರ್ವರಿಗೂ ಲಘು ಉಪಹಾರದ ವ್ಯವಸ್ಥೆ ಮಾಡಿ ಹಂಚಲಾಯಿತು. ಕಾರ್ಯಕ್ರಮದ ಯಶಸ್ವಿಗೆ ಶಾಲೆಯ ಎಲ್ಲ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಸಹಕರಿಸಿದರು.