ಚೆಂಬು: ಊರುಬೈಲು ಶಾಲಾ ಮುಖ್ಯೋಪಾಧ್ಯಾಯ ಸೋಮಣ್ಣ ಅವರಿಗೆ ರಾಜ್ಯಮಟ್ಟದ ಶಿಕ್ಷಣ ಪ್ರಕಾಶ ಪ್ರಶಸ್ತಿ ಪ್ರದಾನ

0

ಚೆಂಬು ಗ್ರಾಮದ ಊರುಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಸೋಮಣ್ಣ ಕೆ.ಆರ್. ಅವರಿಗೆ ಬೆಂಗಳೂರಿನಲ್ಲಿ ಅ.17ರಂದು ‌ನಡೆದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಮುಖ್ಯಶಿಕ್ಷಕರ ವಿಭಾಗದ ರಾಜ್ಯಮಟ್ಟದ ಶಿಕ್ಷಣ ಪ್ರಕಾಶ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಂಗಳೂರಿನ ಸೂರ್ಯ ಫೌಂಡೇಶನ್, ಸ್ಪಾರ್ಕ್ ಅಕಾಡೆಮಿ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಮೈಸೂರು ಸಹಕಾರದೊಂದಿಗೆ ಬೆಂಗಳೂರಿನ ಇಂಡೋ ಗ್ಲೋಬಲ್ ಸಂಸ್ಥೆಯಲ್ಲಿ ‌ನಡೆದ ಸಮಾರಂಭದಲ್ಲಿ ಸೋಮಣ್ಣ ಕೆ.ಆರ್. ಅವರು ಪ್ರಶಸ್ತಿ ಸ್ವೀಕರಿಸಿದರು.