ಗುರಿ ಇಟ್ಟು ಕೆಲಸ ಮಾಡಿದರೆ ನೀವು ಜೀವನದಲ್ಲಿ ಯಶಸ್ಸನ್ನು ಕಾಣುವಿರಿ: ಡಾ. ಉಜ್ವಲ್ ಯು.ಜೆ
ಜೀವನದಲ್ಲಿ ಸಾಧನೆ ಮುಖ್ಯ, ಸಾಧನೆ ಮಾಡಲು ಪ್ರಯತ್ನ ಅಗತ್ಯ: ಸುರೇಶ್ ಎಂ.ಎಸ್.
ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಅವರ ನಿರ್ದೇಶನದಂತೆ ವಿದ್ಯಾರ್ಥಿಗಳಿಗಾಗಿ ಯೂನಿಯನ್ ಸಾರ್ವಜನಿಕ ಸೇವಾ ಆಯೋಗ ಎಂಬ ಕಾರ್ಯಗಾರವನ್ನು ನ. 27 ರಂದು ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಶುಭ ಹಾರೈಸಿದರು. ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಮತ್ತು ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ ಮತ್ತು ಅತಿಥಿಗಳು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಡಾ. ಉಜ್ವಲ್ ಯು.ಜೆ ವಿದ್ಯಾರ್ಥಿಗಳಿಗೆ ಗುರಿ ಅಗತ್ಯ. ಗುರಿಯನ್ನು ತಲುಪಿಸುವ ಪ್ರಯತ್ನ ನಮ್ಮದು. ನೀವು ಗುರಿ ಇಟ್ಟು ಕೆಲಸ ಮಾಡಿದರೆ ಜೀವನದಲ್ಲಿ ಯಶಸ್ಸನ್ನು ಕಾಣುವಿರಿ. ಸಿಕ್ಕಿರುವ ಅವಕಾಶವನ್ನು ಬಳಸಿಕೊಳ್ಳಿ ಎಂದರು. ಮುಖ್ಯ ತರಬೇತುದಾರರಾಗಿ ಮಂಗಳೂರಿನ ಸರ್ವಜ್ಞ ಐ.ಎ.ಎಸ್ ಅಕಾಡೆಮಿಯ ನಿರ್ದೇಶಕ ಸುರೇಶ್ ಎಂ.ಎಸ್ ಆಗಮಿಸಿ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸಾಧನೆ ಮಾಡಲು ಪ್ರಯತ್ನ ಮುಖ್ಯ. ವಿದ್ಯಾರ್ಥಿಗಳ ಯು.ಪಿ.ಎಸ್.ಸಿ ಪರೀಕ್ಷೆಗಾಗಿ ಯಾವ ರೀತಿಯಲ್ಲಿ ತಯಾರಿಯನ್ನು ನಡೆಸಬೇಕು ಎಂಬಿತ್ಯಾದಿ ಮಾಹಿತಿಗಳನ್ನು ತಿಳಿಸಿದರು.
ಕಾರ್ಯಕ್ರಮದ ಮುಂದಾಳತ್ವವನ್ನು ಶಾಲಾ ಆಡಳಿತಾತ್ಮಕ ಸಂಯೋಜನಾಧಿಕಾರಿ ರೇಣುಕಾ ಉತ್ತಪ್ಪ ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು 9ನೇ ತರಗತಿಯ ಅಲಿಸ್ಬ ಸಾರ ಮಾಡಿದರು. ಕೃತಾರ್ಥ ಪಿ.ಡಿ ಸ್ವಾಗತಿಸಿ ಸಾನ್ವಿ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಉಪ ಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ, ವಿದ್ಯಾರ್ಥಿಗಳು ಮತ್ತು ಎಲ್ಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.