ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಡಳಿತ ಮಂಡಳಿಯ ಕೊನೆಯ ಸಭೆಯು ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಅವರ ಅಧ್ಯಕ್ಷತೆಯಲ್ಲಿ ಡಿ.3ರಂದು ನಡೆಯಿತು.
ಸಭೆಯಲ್ಲಿ ಸದಸ್ಯರು ಪಡೆದ ಸಾಲ ಮರುಪಾವತಿ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್, ನಿರ್ದೇಶಕರುಗಳಾದ ವಿನೋದ್ ಕುಮಾರ್, ಚಂದ್ರಶೇಖರ ಚೋಡಿಪಣೆ, ಕುಸುಮಾಧರ ಅಡ್ಕಬಳೆ, ಸಂತೋಷ್ ಚಿಟ್ಟನ್ನೂರು, ಹೆಚ್. ಸೋಮಯ್ಯ, ಶ್ರೀಮತಿ ಚಿತ್ರ ಡಿ.ಎಸ್., ಶ್ರೀಮತಿ ಭಾರತಿ ಪಿ., ಗಣೇಶ ಕರಿಂಬಿ, ಕೇಶವ ಅಡ್ತಲೆ, ವಿಜೇತ್ ಮರುವಳ ಉಪಸ್ಥಿತರಿದ್ದರು.