ಮಂಗಳೂರಿನ ಕೊಂಚಾಡಿ ಮಹಾಲಸಾ ನಾರಾಯಣಿ ದೇವಳದ ಕೊಡಿಮರಕ್ಕೆ ಬೆಟ್ಟಂಪಾಡಿಯಲ್ಲಿ ಮುಹೂರ್ತ

0

ಮಂಗಳೂರಿನ ಕೊಂಚಾಡಿ ಮಹಾಲಸಾ ನಾರಾಯಣಿ ದೇವಸ್ಥಾನಕ್ಕೆ ಕೊಡಿಮರದಮುಹೂರ್ತ ಸುಳ್ಯದಬೆಟ್ಟಂಪಾಡಿಯಲ್ಲಿ ಅರ್ಚಕರ ನೇತೃತ್ವದಲ್ಲಿ
ಫೆ.13 ರಂದು
ನೆರವೇರಿಸಲಾಯತು.

ಅಂಬಟೆಡ್ಕದಲ್ಲಿರುವ ವೆಂಕಟರಮಣ ದೇವ ಮಂದಿರದಲ್ಲಿ ಮಂಗಳೂರಿನ ಅರ್ಚಕ ಯೋಗೇಶ್ ಭಟ್ ರವರ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಬೆಟ್ಟಂಪಾಡಿ ಯಲ್ಲಿರುವ ಗಣಪತಿ ಭಟ್ ರವರ ಜಾಗದ ವ್ಯಾಪ್ತಿಯಲ್ಲಿ ವೆಂಕಟರಮಣ ದೇವ ಮಂದಿರದ ಜಾಗವಿದ್ದು ಮರವನ್ನು ಗುರುತಿಸಿ ಪೂಜೆ ನೆರವೇರಿಸಿ ಕೊಡಿಮರಕ್ಕೆ ಮುಹೂರ್ತ ಮಾಡಲಾಯಿತು. ಕೊಡಿಮರಕ್ಕೆ ತಗಲುವ ವೆಚ್ಚವನ್ನು ಉದ್ಯಮಿ ‌ಸುಧಾಕರ ಕಾಮತ್ ರವರು ಭರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವೆಂಕಟರಮಣ ದೇವಸ್ಥಾನದ ಅಧ್ಯಕ್ಷ
ಕೃಷ್ಣ ಕಾಮತ್ ಅರಂಬೂರು, ಉದ್ಯಮಿ ಸುಧಾಕರ ಕಾಮತ್, ಪ್ರಕಾಶ್ ಶೆಣೈ, ಜಿ.ಜಿ.ನಾಯಕ್
ಹಾಗೂ ಮಂಗಳೂರು ಕೆಂಜಾಡಿ ಮಹಲಸಾ ನಾರಾಯಣಿದೇವಸ್ಥಾನದ ಆಡಳಿತಮಂಡಳಿಯವರು ಉಪಸ್ಥಿತರಿದ್ದರು.