ಕೊಲ್ಲಮೊಗ್ರು ಘನ ತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ, ವಾಹನ ಹಸ್ತಾಂತರ

0

ಕೊಲ್ಲಮೊಗ್ರು ಗ್ರಾ. ಪಂ. ವತಿಯಿಂದ ಘನ ತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ ಹಾಗೂ ತ್ಯಾಜ್ಯ ವಿಲೇವಾರಿ ವಾಹನ ಹಸ್ತಾಂತರ ಕಾರ್ಯಕ್ರಮ ಮಾ.12 ರಂದು ನಡೆಯಿತು. ಕೀರ್ತಿ ಸಂಜೀವಿನಿ ಒಕ್ಕೂಟ ವತಿಯಿಂದ ಘನ ತ್ಯಾಜ್ಯ ವಿಲೇವಾರಿ ಘಟಕ ಕಾರ್ಯನಿರ್ವಹಿಸಲಿದೆ.

ಘಟಕವನ್ನು ಗ್ತಾ.ಪಂ ಅಧ್ಯಕ್ಷೆ ಮೋಹಿನಿ ಕಟ್ಟ ದೀಪ ಬೆಳಗಿಸಿ ಉದ್ಘಾಟಿಸಿದರು . ಈ ಸಂದರ್ಭದಲ್ಲಿ ಗ್ರಾ.ಪಂ ಉಪಾಧ್ಯಕ್ಷ ಮಾದವ ಚಾಂತಾಳ, ಗ್ರಾ.ಪಂ ಸದಸ್ಯರುಗಳಾದ ಪುಷ್ಪರಾಜ ಪಡ್ಪು, , ಅಶ್ವಥ್ ಯಲದಾಳು, ಜಯಶ್ರೀ ಚಾಂತಾಲ, ಶಿವಮ್ಮ ಕಟ್ಟಮೈಲ, ಪಿಡಿಒ ಚೆನ್ನಪ್ಪ ನಾಯ್ಕ, ಕಾರ್ಯದರ್ಶಿ ಮೋಹನ್ ಕಡ್ತಲ್ ಕಜೆ, ಗ್ತಾ.ಪಂ ಸಿಬ್ಬಂದಿಗಳು, ಗ್ರಾಮಸ್ಥರು, ಒಕ್ಕೂಟ ಸದಸ್ಯರು ಉಪಸ್ಥಿತರಿದ್ದರು.