ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದ ಯೋಧ ಪದ್ಮನಾಭ ಸೊರಂಜರಿಗೆ ಅದ್ದೂರಿ ಸ್ವಾಗತ

0

ಭಾರತೀಯ ಸೇನೆಯಲ್ಲಿ ಸುಮಾರು 40 ವರ್ಷಗಳ ಕಾಲ ವಿವಿಧ ಕಡೆಗಳಲ್ಲಿ, ವಿವಿಧ ಹುದ್ದೆಗಳನ್ನು ನಿರ್ವಹಿಸಿ ಜೂ.30ರಂದು ಸೇವಾ ನಿವೃತ್ತರಾದ ಮಂಡೆಕೋಲು ಗ್ರಾಮದ ಪೇರಾಲು ಪದ್ಮನಾಭ ಸೊರಂಜರು ಇಂದು ಹುಟ್ಟೂರಿಗೆ ಆಗಮಿಸಿದ್ದು ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಊರವರು ಜಾಲ್ಸೂರು ಗ್ರಾಮದ ಅಡ್ಕಾರು ವಿನೋಭಾನಗರದಿಂದ ಪದ್ಮನಾಭ ಸೊರಂಜರನ್ನು ಸ್ವಾಗತಿಸಿ ವಾಹನ ಜಾಥಾದಲ್ಲಿ ಪೇರಾಲು ಶ್ರೀರಾಮ ಭಜನಾ ಮಂದಿರ ಪೇರಾಲು ಅಂಬ್ರೋಟಿ ತನಕ ಬಂದು ಭಜನಾ ಮಂದಿರದಲ್ಲಿ ಅದ್ದೂರಿ ಯಾಗಿ ಸ್ವಾಗತಿಸಿ, ಸನ್ಮಾನಿಸಲಾಯಿತು.