2024 – 25 ನೇ ಸಾಲಿನ ಅಂಚೆ ಇಲಾಖೆಯ ವಿಭಾಗೀಯ ಹಾಗೂ ಸುಳ್ಯ ಉಪ ವಿಭಾಗ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಬೆಳ್ಳಾರೆಯ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ಜು. 17ರಂದು ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ವಿಭಾಗದ ಅಂಚೆ ಅಧೀಕ್ಷಕ ರವೀಂದ್ರ ನಾಯ್ಕ ಎಂ. ವಹಿಸಿದ್ದರು.








ಮುಖ್ಯ ಅತಿಥಿಗಳಾಗಿ ಉಪ ಅಧೀಕ್ಷಕ ಚಂದ್ರ ನಾಯ್ಕ ಎಂ., ಸುಳ್ಯ ಅಂಚೆ ಉಪವಿಭಾಗದ ನಿರೀಕ್ಷಕ ವಿನೋದ್ ಕುಮಾರ್, ಮಂಗಳೂರು ಹಿರಿಯ ವ್ಯವಸ್ಥಾಪಕ ಸುಬ್ರಮಣಿ ಎನ್., ಸುಳ್ಯ ಪ್ರಧಾನ ಅಂಚೆ ಕಚೇರಿಯ ಅಂಚೆಪಾಲಕ ಎಂ.ಕೆ ಮೋಹನ್, ಬೆಳ್ಳಾರೆ ಉಪ ಅಂಚೆಪಾಲಕರಾದ ಶ್ರೀಮತಿ ಯಶೋಧ ಉಪಸ್ಥಿತರಿದ್ದರು.
2024 25ರ ಅವಧಿಯಲ್ಲಿ ವಿವಿಧ ಅಂಚೆ ಸೇವೆಗಳನ್ನು ನೀಡುವಲ್ಲಿ ಸಾಧನೆಗೈದ ವಿವಿಧ ಸ್ಥರದ ಉದ್ಯೋಗಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಅಂಚೆ ಕಚೇರಿಯಲ್ಲಿ ದೊರೆಯುವ ವಿವಿಧ ಸೇವೆಗಳ ಬಗ್ಗೆ ವಿವರಿಸಿ ಇದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳುವಂತೆ ಅಂಚೆ ಅಧಿಕ್ಷಕರು ಮನವಿ ಮಾಡಿಕೊಂಡರು.
ಅನಂತ ಕೃಷ್ಣ ಪ್ರಭು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಾಮಕೃಷ್ಣ ಭಟ್ ವಂದಿಸಿದರು.










