ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ನ. 22 ರಂದು ಹಿರಿಯ ವಿದ್ಯಾರ್ಥಿ ಸಮ್ಮಿಲನ ಕಾರ್ಯಕ್ರಮವು ಕಾಲೇಜಿನ ಧನ್ವಂತರಿ ಆಡಿಟೋರಿಯಂನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆವಿಜಿ ಆಯುರ್ವೇದ ಅಲುಮ್ನಿ ಅಸೋಸಿಯೇಷನ್ನಿನ ಅಧ್ಯಕ್ಷ ಡಾ. ಗುರುಪ್ರಸಾದ್ ಅಗ್ಗಿತ್ತಾಯ ವಹಿಸಿ ಮಾತನಾಡಿ, ಅಲುಮ್ನಿ ಅಸೋಸಿಯೇಷನ್ನಿನ ಗುರಿ ಹಾಗೂ ಉದ್ದೇಶಗಳನ್ನು ಹಿರಿಯ ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ). ಇದರ ಅಧ್ಯಕ್ಷರಾದ ಡಾ. ಕೆ. ವಿ ಚಿದಾನಂದ ಇವರು ಕಾಲೇಜು ಮೊದಲಿನಿಂದ ಇಲ್ಲಿನವರೆಗೆ ನಡೆದು ಬಂದ ದಾರಿ ಹಾಗೂ ಈ ಬೆಳವಣಿಗೆಗೆ ದುಡಿದ ಹಿರಿಯ ವಿಧ್ಯಾರ್ಥಿಗಳ ಶ್ರಮದ ಕುರಿತು ತಿಳಿಸಿದರು.

ಗೌರವ ಅತಿಥಿಗಳಾಗಿ 1997-98 ಸಾಲಿನ ವಿದ್ಯಾರ್ಥಿಯಾದ ಹಾಗೂ ಸ್ವರ್ಣ ಕ್ಲಿನಿಕ್ ನೆಲ್ಲಿಹುದಿಕೇರಿ ಮಡಿಕೇರಿಯ ವೈದ್ಯರುಗಳಾದ ಡಾ. ಉದಯ್ ಕುಮಾರ್ ಎಸ್ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಶುಭ ಹಾರೈಸಿದರು.
1996-97 ಸಾಲಿನ ವಿದ್ಯಾರ್ಥಿಯಾದ ಹಾಗೂ ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ ವಿ ಯವರು ಉಪಸ್ಥಿತರಿದ್ದು, ಪ್ರತಿ ವರ್ಷವೂ ಇಂತಹ ಕಾರ್ಯಕ್ರಮವು ನಡೆಯುತ್ತಿರಲಿ ಎಂದು ಆಶಯಿಸುತ್ತಾ ಸಮ್ಮಿಲನಕ್ಕೆ ಆಗಮಿಸಿದ ಹಿರಿಯ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.








ವೇದಿಕೆಯಲ್ಲಿ ಕೆವಿಜಿ ಆಯುರ್ವೇದ ಅಲುಮ್ನಿ ಅಸೋಸಿಯೇಷನ್ನಿನ ಖಜಾಂಜಿಯಾದ ಡಾ. ವಿನಯ್ ಶಂಕರ್ ಭಾರದ್ವಾಜ್ ಇವರು ಉಪಸ್ಥಿತರಿದ್ದರು.
ಗೌರವ ಅತಿಥಿಗಳಾಗಿ ಆಗಮಿಸಿದ ಡಾ. ಉದಯ್ ಕುಮಾರ್ ಎಸ್ ಇವರನ್ನು ಅಲುಮ್ನಿ ಅಸೋಸಿಯೇಷನ್ನಿನ ವತಿಯಿಂದ ಸನ್ಮಾನಿಸಿ ಗೌರವಿಸಿದರು.
ಕಾರ್ಯದರ್ಶಿ ಡಾ. ಅವಿನಾಶ್ ಕೆ.ವಿ ಇವರು 2024-25 ಸಾಲಿನ ಅಲುಮ್ನಿ ಅಸೋಸಿಯೇಷನಿನ್ನ ವಾರ್ಷಿಕ ವರದಿಯನ್ನು ವಾಚಿಸಿದರು.
ಸಮ್ಮಿಲನಕ್ಕೆ ಆಗಮಿಸಿದ ಹಳೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ತಿಳಿಸಿದರು.
ಕಾರ್ಯಕ್ರಮವನ್ನು ಹಿರಿಯ ವಿದ್ಯಾರ್ಥಿಯಾದ ಡಾ. ಪ್ರಮೋದ್ ಪಿ. ಎ ಹಾಗೂ ಡಾ. ಆದಿತ್ಯ ನಾರಾಯಣ್ ಪ್ರಾರ್ಥಿಸಿ, ಡಾ. ಸಮ್ಮಿಲನದ ಸಂಚಾಲಕ ಡಾ. ಲಕ್ಷ್ಮೀಶ ಕೆ ಎಸ್ ಸ್ವಾಗತಿಸಿ, ಅಲುಮ್ನಿ ಅಸೋಸಿಯೇಷನಿನ್ನ ಸಹ ಕಾರ್ಯದರ್ಶಿಯಾದ ಡಾ ನಿತೀಶ್ ಕೆ ವಂದಿಸಿ, ಕಾಲೇಜಿನ ಅಲುಮ್ನಿಯಾದ ಡಾ. ಹರ್ಷಿತಾ ಎಂ ಹಾಗೂ ಡಾ. ನಿಲೋಫರ್ ತಹನಿ ನಿರೂಪಿಸಿದರು.










