ಇಂದು‌ ನಾಗರಪಂಚಮಿ ಹಬ್ಬ

0

 

ತಾಲೂಕಿನ ದೇವಸ್ಥಾನಗಳಲ್ಲಿ ನಾಗದೇವರಿಗೆ ಹಾಲೆರೆಯುತ್ತಿರುವ ಭಕ್ತರು

 

ಇಂದು ನಾಗರ ಪಂಚಮಿ ಹಬ್ಬ. ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ಭಕ್ತರು ಭಕ್ತಿ ಸಡಗರದಿಂದ ನಾಗ ದೇವರಿಗೆ ಹಾಲೆರೆಯುತ್ತಿದ್ದಾರೆ. ಅಲ್ಲದೆ ಕೆಲವು ಕಡೆಗಳಲ್ಲಿ ಮನೆ ಗಳಲ್ಲಿಯೂ ನಾಗದೇವರ ಆರಾಧನೆ ನಡೆಯುತ್ತಿದೆ.

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಆಚರಣೆ

 

ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ನಾಗರ ಪಂಚಮಿ ದಿನವಾದ ಆ.02 ರಂದು ನಾಗಬನದಲ್ಲಿ ನಾಗರ ಪಂಚಮಿ ಆಚರಣೆ ನಡೆಯಿತು.
ಶ್ರೀ ನಾಗದೇವರಿಗೆ ಹಾಲು, ಸಿಯಾಳಾಭಿಷೇಕ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಹಾಗೂ ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.

 

 

 

 

 

ನಾಗಪಟ್ಟಣ ಸದಾಶಿವ ದೇವಸ್ಥಾನದ ನಾಗನಕಟ್ಟೆಯಲ್ಲಿ ನಾಗರ ಪಂಚಮಿ

ನಾಗಪಟ್ಟಣ ಸದಾಶಿವ ದೇವಸ್ಥಾನದ ನಾಗನಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ಪೂಜೆಯು ಅರ್ಚಕ ಶಿವಪ್ರಸಾದ್ ರವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವ್ಯ‌ಸ.ಅಧ್ಯಕ್ಷ ದಿನೇಶ್ ಕೋಲ್ಚಾರು, ಸದಸ್ಯರಾದ ಬಾಬು ಗೌಡ ನಾಗಪಟ್ಟಣ, ಹೇಮನಾಥ ಕುರುಂಜಿ, ಆನಂದ ಪರಿವಾರಕಾನ, ಶರತ್ ಗುಡ್ಡೆಮನೆ, ಸೆಲ್ವಂ ನಾಗಪಟ್ಟಣ ಹಾಗೂ ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.

ಪಂಜ ಸೀಮೆಯ ದೇವಳದಲ್ಲಿ
ನಾಗರ ಪಂಚಮಿ
ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ನಾಗಬನದ ಕಟ್ಟೆಯಲ್ಲಿ ನಾಗರ ಪಂಚಮಿ ಆ.2 ರಂದು ಜರುಗಿತು. ಆ ಪ್ರಯುಕ್ತ ತಂಬಿಲ ಸೇವೆ,ನಾಗ ದೇವರಿಗೆ ಹಾಲು, ಸೀಯಾಳ, ತುಪ್ಪ, ಜೇನು ಮೊದಲಾದ
ಅಭಿಷೇಕಗಳು ನಡೆಯಿತು. ವೈಧಿಕ ಕಾರ್ಯಗಳನ್ನು ಅರ್ಚಕ ರಾಮಚಂದ್ರ ಭಟ್ ರವರ ಹಿರಿತನದಲ್ಲಿ ಜರುಗಿತು.ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು, ವ್ಯವಸ್ಥಾಪನಾ ಸಮಿತಿ ಸದಸ್ಯರು , ಭಕ್ತರು ಉಪಸ್ಥಿತರಿದ್ದರು.

 

ಬೆಳ್ಳಾರೆ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ನಾಗನಕಟ್ಟೆಯಲ್ಲಿ ನಾಗ ತಂಬಿಲ

ಶ್ರೀ ರಾಜರಾಜೇಶ್ವರಿ ದೇವಸ್ಥಾನ ಗೌರಿಪುರಂ ಬೆಳ್ಳಾರೆಯ ಇಲ್ಲಿಯ ಚಿತ್ರಕೂಟ ಸಹಿತ ಶ್ರೀ ನಾಗಬ್ರಹ್ಮ, ನಾಗರಾಜ ವೀಣಾಪಾಣಿ ನಾಗಕನ್ನಿಕೆಯರ ಕ್ಷೇತ್ರದಲ್ಲಿ ನಾಗರ ಪಂಚಮಿ ಪ್ರಯುಕ್ತ ನಾಗದೇವರ ಪೂಜೆಯೊಂದಿಗೆ ಕ್ಷೀರ, ಸೀಯಾಳಾಭಿಷೇಕದ ಪೂರ್ವ ಶ್ರೀ ಮಹಾಗಣಪತಿ ಹೋಮದೊಂದಿಗೆ ವೈದಿಕ ಕಾರ್ಯಗಳು ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಮುರಳಿಕೃಷ್ಣ ನಂಬೂದರಿ ಕುನ್ನತ್ತಿಲ್ ಇವರ ನೇತೃತ್ವದಲ್ಲಿ ನಡೆಯುತ್ತಿದೆ.


ಊರ ಪರವೂರ ಭಗವದ್ಬಕ್ತರು ಈ ಪೂಜಾ ಕಾರ್ಯದಲ್ಲಿ ಉಪಸ್ಥಿತರಿದ್ದಾರೆ.

 

ಬೆಟ್ಟಂಪಾಡಿ ನಾಗನಕಟ್ಟೆಯಲ್ಲಿ ನಾಗರ ಪಂಚಮಿ ವಿಶೇಷ ಪೂಜೆ

ಸುಳ್ಯ ಕಸಬಾದ ಬೆಟ್ಟಂಪಾಡಿಯಲ್ಲಿ ನಾಗನಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆಯು ನಡೆಯಿತು. ಅರ್ಚಕ ಶಿವಪ್ರಸಾದ್ ನಾಗಪಟ್ಟಣ ನಾಗನಿಗೆ ಅಭಿಷೇಕ ಮಾಡಿ ಪೂಜೆಯನ್ನು ನೆರವೇರಿಸಿದರು.

 

 

ಅಡ್ಕಾರು: ಅಂಜನಾದ್ರಿಯಲ್ಲಿ ನಾಗರ ಪಂಚಮಿ ಆಚರಣೆ

ಜಾಲ್ಸೂರು ಗ್ರಾಮದ ಅಡ್ಕಾರು ಅಂಜನಾದ್ರಿಯ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರದಲ್ಲಿ ನಾಗರ ಪಂಚಮಿಯನ್ನು ಆ.2ರಂದು ಆಚರಿಸಲಾಯಿತು.
ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ವೇ. ಮೂ. ಪುರೋಹಿತ ನಾಗರಾಜ ಭಟ್ ಅವರ ನೇತೃತ್ವದಲ್ಲಿ ಶ್ರೀಕ್ಷೇತ್ರದ ನಾಗಸಾನಿಧ್ಯದಲ್ಲಿ ಎಳನೀರು ಅಭಿಷೇಕ, ಹಾಲಭಿಷೇಕ ನೆರವೇರಿಸಲಾಯಿತು. ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಾಗರಪಂಚಮಿ ಆಚರಣೆ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿ ದಿನವಾದ ಆ.02 ರಂದು ನಾಗನಕಟ್ಟೆಯಲ್ಲಿ ನಾಗರ ಪಂಚಮಿ ಆಚರಣೆ ನಡೆಯಿತು.
ಶ್ರೀ ನಾಗದೇವರಿಗೆ ಹಾಲು,ಸಿಯಾಳಾಭಿಷೇಕ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಅಯ್ಯನಕಟ್ಟೆ ಶ್ರೀ ಉಳ್ಳಾಕುಲು ಸನ್ನಿಧಿಯಲ್ಲಿ ನಾಗತಂಬಿಲ

ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಸನ್ನಿಧಿ ಮೂರುಕಲ್ಲಡ್ಕದಲ್ಲಿ ನಾಗರ ಪಂಚಮಿಯ ಅಂಗವಾಗಿ
ನಾಗತಂಬಿಲ ಆ. 2ರಂದು ವೇ.ಮೂ. ಕಾಯಾರ ಸಂದೇಶ ಶರ್ಮಾರ ಹಿರಿತನದಲ್ಲಿ ನಡೆಯಿತು. ಊರ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಆಲೆಟ್ಟಿ: ಮೊರಂಗಲ್ಲು ನಾಗನಕಟ್ಟೆಯಲ್ಲಿ ನಾಗರ ಪಂಚಮಿ

ಮೊರಂಗಲ್ಲು ಶ್ರೀ ಧೂಮಾವತಿ ಸಪರಿವಾರ ದೈವಸ್ಥಾನ‌ದ ನಾಗನಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆಯು ನಡೆಯಿತು. ಅರ್ಚಕ ಹರ್ಷಿತ್ ಬನ್ನಿಂತಾಯ ರವರ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿತು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗುರುಪ್ರಸಾದ್ ರೈ ಮೊರಂಗಲ್ಲು ಮತ್ತು ‌ಕುಟುಂಬಸ್ಥರು ಹಾಗೂ ಮೊರಂಗಲ್ಲು ಬೈಲಿನವರು ಪಾಲ್ಗೊಂಡರು.

ಪೆರುವಾಜೆ ದೇವಸ್ಥಾನದಲ್ಲಿ ನಾಗರ ಪಂಚಮಿ ಆಚರಣೆ

ಶ್ರೀ ಜಲದುರ್ಗಾ ದೇವಿ ದೇವಸ್ಥಾನ ಶ್ರೀ ಕ್ಷೇತ್ರ ಪೆರುವಾಜೆಯಲ್ಲಿ ಆ.02 ರಂದು ನಾಗರ ಪಂಚಮಿ ಪ್ರಯುಕ್ತ ದೇವರಮಾರು ನಾಗಸಾನಿಧ್ಯ ದಲ್ಲಿ ಶ್ರೀ ನಾಗದೇವರಿಗೆ ಹಾಲು, ಸಿಯಾಳ, ಪಂಚಮೃತ ಅಭಿಷೇಕ ತಂಬಿಲ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ ಪದ್ಮನಾಭ ಶೆಟ್ಟಿ ಹಾಗೂ ಸರ್ವ ಸದಸ್ಯರು ಭಕ್ತಾದಿಗಳು ಭಾಗವಹಿಸಿದರು.