ಮೊಗರ್ಪಣೆ ಹೊಳೆಯಲ್ಲಿ ಏರುತ್ತಿರುವ ನೀರಿನ ಮಟ್ಟ

0

 

ಅಂಗಡಿ,ನರ್ಸರಿ ಸಮೀಪದ ವರೆಗೆ ಬಂದ ನೀರು

ಸುಳ್ಯ ಮೊಗರ್ಪಣೆ ಮಸೀದಿ ಸಮೀಪದ ನದಿಯಲ್ಲಿಯೂ ನೀರಿನ ಮಟ್ಟ ಹೆಚ್ಚುತ್ತಿದ್ದು ಒಂದು ಬದಿ ಅಂಗಡಿ ಹಾಗೂ ಇನ್ನೊಂದು ಬದಿ ಇರುವ ನರ್ಸರಿವರೆಗೂ ನೀರು ಬಂದಿದೆ.


ಇನ್ನೂ ನೀರಿನ ಪ್ರಮಾಣ ಹೆಚ್ಚಾದಲ್ಲಿ ಸಮಸ್ಯೆಯಾಗಬಹುದೆಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಪಯಸ್ವಿನಿ ನದಿಯಲ್ಲಿ ನೀರಿನ ಹರಿವು ಹೆಚ್ಚಾದುದರಿಂದ ಈ ನದಿಯಲ್ಲಿಯೂ ನೀರಿನ ಪ್ರಮಾಣ ಹೆಚ್ಚಾಗಿದೆ.
ಹಳೆಗೇಟು ಅಂಗಡಿಗಳ ಹಿಂಬದಿಯಲ್ಲಿಯೂ ಪಯಸ್ವಿನಿಯ ನೀರಿನ ಮಟ್ಟ ಹೆಚ್ಚಾಗುತ್ತಿದೆ.