ಮೊತ್ತ ಮೊದಲ ಬಾರಿಗೆ ಕೊತ್ನಡ್ಕ ಭೇಟಿ ನೀಡಿದ ಉಸ್ತುವಾರಿ ಸಚಿವ ಹಾಗೂ ಜಿಲ್ಲಾಧಿಕಾರಿ

0

 

ಸಿದ್ದನ ಗುಡ್ಡೆ ಕುಸಿತ : ಕೊತ್ನಡ್ಕ, ಉಪ್ಪುಕಳದ 60 ಕ್ಕೂ ಮಿಕ್ಕಿ ಮನೆಗಳಿಗೆ ಸಂಪರ್ಕ ಕಡಿತ

ತುರ್ತು ರಸ್ತೆ ವ್ಯವಸ್ಥೆಗೆ ಎಷ್ಟಿಮೇಟ್ ಮಾಡಲು ಡಿ.ಸಿ ಸೂಚನೆ


ಮೊತ್ತ ಮೊದಲ ಭಾರಿಗೆ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್  ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರರವರು ಬ‍ಾಳುಗೋಡು ಗ್ರ‍ಾಮದ ಕೊತ್ನಡ್ಕ ಪ್ರದೇಶಕ್ಕೆ ಭೇಟಿ ನೀಡಿದರು.

 

 

ಸಿದ್ದನ ಗುಡ್ಡೆ ಎಂಬಲ್ಲಿ ಗುಡ್ಡೆ ಜರಿದು ಕೊತ್ನಡ್ಕ, ಉಪ್ಪುಕಳದ 60 ಕ್ಕೂ ಹೆಚ್ಚು  ಮನೆಗಳಿದ್ದು, ಸಂಪರ್ಕ ಕಳೆದುಕೊಂಡಿರುವ ಬಗ್ಗೆ ಮಾಹಿತಿ ನೀಡಲಾಯಿತು.

ತುರ್ತಾಗಿ ಆ ಭಾಗದ ಜನರಿಗೆ ವ್ಯವಸ್ಥೆ ಮಾಡುವ ಸಲುವಾಗಿ ಈಗ ಬಿದ್ದಿರುವ ಮಣ್ಣು ತೆರವು ಮಾಡಲು ಹಾಗೂ ಹೊಸದಾಗಿ ರಸ್ತೆ ಮಾಡಲು ಎಷ್ಟೀಮೇಟ್ ತಯಾರು ಮಾಡುವಂತೆ ಎಷ್ಟಿಮೇಟ್ ಮಾಡಲು ಇಂಜಿನಿಯರ್ ಹನುಮಂತ ರಾಯಪ್ಪ ಅವರಿಗೆ ಸೂಚನೆ ನೀಡಿದರು.

ಈ ಸಂದರ್ಭ
ಎ ಸಿ ಗಿರೀಶ್ ನಂದನ್, ಜಿ.ಪಂ ಸಿ ಇ ಒ ಕುಮಾರ್ , ಬಿಜೆಪಿಯ ಸುದರ್ಶನ್ ಮೂಡಬಿದ್ರೆ, ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ಮುಳಿಯ ಕೇಶವ ಭಟ್, ಎ ವಿ ತೀರ್ಥರಾಮ , ಉದಯ ಕೊಪ್ಪಡ್ಕ, ಹರಿಹರ ಗ್ರಾ.ಪಂ ಅಧ್ಯಕ್ಷ ಜಯಂತ ಬಾಳುಗೋಡು, ಪಿ ಡಿ ಒ ಮಣಿಯಾನ ಪುರುಷೋತ್ತಮ ಮತ್ತಿತರರು ಉಪಸ್ಥಿತರಿದ್ದರು.