ಕನಕಮಜಲು ಗ್ರಾ.ಪಂ. ವ್ಯಾಪ್ತಿಯಲ್ಲಿ ನಾಯಿಗಳಿಗೆ ಉಚಿತ ರೇಬಿಸ್ ನಿರೋಧಕ ಲಸಿಕಾ ಶಿಬಿರ

0

ದಕ್ಷಿಣ ಕನ್ನಡ ಜಿಲ್ಲಾ ಪ್ರಾಣಿದಯಾ ಸಂಘ, ಸುಳ್ಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕನಕಮಜಲು ಗ್ರಾಮ ಪಂಚಾಯತಿ, ಕನಕಮಜಲು ಯುವಕ ಮಂಡಲದ ಸಹಯೋಗದಲ್ಲಿ ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರವು ಆ.4ರಂದು ನಡೆಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಧರ ಕುತ್ಯಾಳ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಶು ವೈದ್ಯಾಧಿಕಾರಿ ಡಾ. ನಿತಿನ್ ಪ್ರಭು, ಪಶುವೈದ್ಯಕೀಯ ಇಲಾಖೆಯ ಪರಿವೀಕ್ಷಕ ದೇವರಾಜ್ ಹಾಗೂ ಪಶು ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಪಶುವೈದ್ಯ ಇಲಾಖೆಯ ವತಿಯಿಂದ ಕನಕಮಜಲು ಗ್ರಾಮದ ಗ್ರಾ.ಪಂ. ಬಳಿ, ನೆಡಿಲು ಸಾರ್ವಜನಿಕ ಬಾವಿ ಬಳಿ, ಮಾಣಿಮಜಲು ಬಾವಿ ಬಳಿ, ಸುಣ್ಣಮೂಲೆ ವಿಷ್ಣುಮೂರ್ತಿ
ಬಳಿ, ಕಾರಿಂಜ ಅಂಗನವಾಡಿ ಬಳಿ ಹಾಗೂ ಪಂಜಿಗುಂಡಿ ಕಾಲನಿಯ ಬಳಿಯಲ್ಲಿ ಉಚಿತ ಲಸಿಕಾ ಶಿಬಿರವು ಜರುಗಲಿದೆ.
ಈ ಸಂದರ್ಭದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ, ಕಾರ್ಯದರ್ಶಿ ರಮೇಶ್, ಉಪಾಧ್ಯಕ್ಷೆ ಶ್ರೀಮತಿ ದೆವಕಿ ಕುದ್ಕುಳಿ, ಸದಸ್ಯರುಗಳಾದ ರವಿಚಂದ್ರ ಕಾಪಿಲ, ಇಬ್ರಾಹಿಂ ಕಾಸಿಂ ಕನಕಮಜಲು, ಶ್ರೀಮತಿ ಸುಮಿತ್ರ ಕುತ್ಯಾಳ, ಶ್ರೀಮತಿ ಪ್ರೇಮಲತಾ ಪಂಜಿಗುಂಡಿ, ಶ್ರೀಮತಿ ಶಾರದಾ ಉಗ್ಗಮೂಲೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.