ಗರುಡ ಆ್ಯಪ್ – ವೋಟರ್ ಹೆಲ್ಪ್ ಲೈನ್ ಆ್ಯಪ್ ಕುರಿತು ತರಬೇತಿ ನೀಡಲು ಮಾಸ್ಟರ್ ತರಬೇತುದಾರರಾಗಿ ಪೃಥ್ವಿ ಕುಮಾರ್, ಉಣ್ಣಿಕೃಷ್ಣನ್ ನೇಮಕ

0
188

 

p>

 

ಸುಳ್ಯ ತಾಲೂಕು ವಿಧಾನ ಸಭಾ ಕ್ಷೇತ್ರ ಮತದಾರರ ಪಟಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಗರುಡ ಆಪ್ ಮತ್ತು ವೋಟರ್ ಹೆಲ್ಪ್ ಲೈನ್ ಆಪ್ ಅಭಿಯಾನವನ್ನು ಹಮ್ಮಿಕೊಳ್ಳಲು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ.
ಅದರಂತೆ ಆ.೮, ಆ.೧೦ ಮತ್ತು ಆ.೧೧ರಂದು ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್, ಗುತ್ತಿಗಾರು ಪಂಚಾಯತ್ ಪರಿಶಿಷ್ಟ ವರ್ಗದ ಸಭಾಭವನ, ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತರಬೇತಿ ಏರ್ಪಡಿಸಲಾಗಿದ್ದು, ಮಾಸ್ಟರ್ ತರಬೇತುದಾರರಾಗಿ ದುಗಲಡ್ಕ ಪ್ರೌಢಶಾಲೆಯ ಪದವೀಧರ ಸಹ ಶಿಕ್ಷಕ ಉಣ್ಣಿಕೃಷ್ಣನ್ ಹಾಗೂ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಪೃಥ್ವಿ ಕುಮಾರ್‌ರನ್ನು ನೇಮಗೊಳಿಸಿ ತಹಶೀಲ್ದಾರ್ ಆದೇಶ ಮಾಡಿದ್ದಾರೆ.

LEAVE A REPLY

Please enter your comment!
Please enter your name here