ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಸುಳ್ಯ : ದಿ. ಡಾ. ಕುರುಂಜಿ ವೆಂಕಟ್ರಮಣ ಗೌಡರ 9ನೇ ಪುಣ್ಯತಿಥಿ ಆಚರಣೆ

0

ಆಧುನಿಕ ಸುಳ್ಯದ ನಿರ್ಮಾತೃ , ಶಿಕ್ಷಣ ಬ್ರಹ್ಮ, ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷರಾದ ಡಾ. ಕುರುಂಜಿ ವೆಂಕಟ್ರಮಣ ಗೌಡರ 9ನೇ ವರ್ಷದ ಪುಣ್ಯತಿಥಿಯ ಪ್ರಯುಕ್ತ ನುಡಿನಮನ ಕಾರ್ಯಕ್ರಮವು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಆ. 7ರಂದು ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾದರ್ ಡಿ.ವಿ. ಯವರು ಕುರುಂಜಿ ಯವರ ತತ್ವ- ಆದರ್ಶಗಳನ್ನು ತಿಳಿಸಿ, ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಕೆವಿಜಿ ಯವರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ನುಡಿ ನಮನ ಸಲ್ಲಿಸಿದರು.

LEAVE A REPLY

Please enter your comment!
Please enter your name here