ನೆಟ್ಟಾರು : ಅಕ್ಷಯ ಯುವಕ ಮಂಡಲದ ವತಿಯಿಂದ ಅಗಲಿದ ಪ್ರವೀಣ್ ನೆಟ್ಟಾರುರವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

0

ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಪ್ರವೀಣ್ ನೆಟ್ಟಾರು ಇವರಿಗೆ ಅಕ್ಷಯ ಯುವಕ ಮಂಡಲ ನೆಟ್ಟಾರು ವತಿಯಿಂದ ಸಾರ್ವಜನಿಕ ಶ್ರದ್ಧಾಂಜಲಿ ಸಭೆ, ನುಡಿ ನಮನ ಆ.07 ರಂದು ಶಾಲಾ ವಠಾರದಲ್ಲಿ ನಡೆಯಿತು. ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.


ಯುವಕ ಮಂಡಲದ ಅಧ್ಯಕ್ಷ ಶ್ರೀಜಿತ್ ರೈ ಮಣಿಕ್ಕರ ಪ್ರಾಸ್ತಾವಿಕವಾಗಿ ನುಡಿದರು.
ಸ್ಥಾಪಕಾಧ್ಯಕ್ಷರಾದ ದೇವದಾಸ ನೆಟ್ಟಾರು,ಸದಸ್ಯರಾದ ಪದ್ಮನಾಭ ಕಲಾಸುಮ,ಶೈಲೇಶ್ ನೆಟ್ಟಾರು ನುಡಿನಮನ ಸಲ್ಲಿಸಿದರು.ಪ್ರವೀಣ್ ಹೆಸರಲ್ಲಿ ಶಾಶ್ವತ ಯೋಜನೆಯೊಂದನ್ನು ತರಬೇಕು ಅನ್ನೋದು ಸಭೆಯಲ್ಲಿ ವ್ಯಕ್ತವಾಯಿತು. ನಂತರ ಅಗಲಿದ ದಿವ್ಯ ಚೇತನ ದಿ.ಪ್ರವೀಣ್ ನೆಟ್ಟಾರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಸಭೆಯಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಗೌರಿ ನೆಟ್ಟಾರು,ಪ್ರವೀಣ್ ಕುಟುಂಬದ ಲೋಕೇಶ್ ಪೂಜಾರಿ, ಯುವಕ ಮಂಡಲದ ಸದಸ್ಯರು, ಮಹಿಳಾ ಮಂಡಲದ ಸದಸ್ಯರು,ಊರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here