ರಾಜ್ಯ ಮಟ್ಟದ ಅಂತರ್ ವಿ.ವಿ. ಕಿರು ನಾಟಕ ಸ್ಪರ್ಧೆ ಆಳ್ವಾಸ್ ನ “ಅಮರಕ್ರಾಂತಿ” ಪ್ರಥಮ

0

 

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಮೂಡುಬಿದ್ರೆ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ  ನಡೆದ ರಾಜ್ಯ ಮಟ್ಟದ ಅಂತರ್ ವಿ.ವಿ.ಗಳ ಕಿರುನಾಟಕ ಸ್ಪರ್ಧೆಯಲ್ಲಿ ಮಂಗಳೂರು ವಿ.ವಿ.ಯನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳು ಅಭಿನಯಿಸಿದ ‘ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ-1837’ ನಾಟಕವು ಪ್ರಥಮ ಪ್ರಶಸ್ತಿಯನ್ನು ಪಡೆದಿರುತ್ತದೆ.


ಕರ್ನಾಟಕದ ಪ್ರತಿಷ್ಠಿತ 15 ವಿಶ್ವವಿದ್ಯಾನಿಲಯಗಳು ಪ್ರದರ್ಶಿಸಿದ ಒಟ್ಟು 31 ನಾಟಕಗಳಲ್ಲಿ ಆಳ್ವಾಸ್ ತಂಡ ಪ್ರಥಮ ಸ್ಥಾನ ಗಳಿಸಿರುತ್ತದೆ.
ಡಾ| ಪ್ರಭಾಕರ ಶಿಶಿಲ ರಚಿಸಿದ ಈ ನಾಟಕವನ್ನು ಜೀವನ್ ರಾಂ ಸುಳ್ಯ ನಿರ್ದೇಶಿಸಿದ್ದರು. ಭುವನ ಮಣಿಪಾಲ ಮತ್ತು ಉಜ್ವಲ್ ಯು.ವಿ.,ಯತಿನ್ ಹಾರಂಬಿಯವರು ನಿರ್ದೇಶನ ಹಾಗೂ ತಾಂತ್ರಿಕವಾಗಿ ಸಹಕರಿಸಿದ್ದರು.
ಸಂಗೀತದಲ್ಲಿ ಮನುಜ ನೇಹಿಗ ಸುಳ್ಯ, ಬೆಳಕು ನಿರ್ವಹಣೆ ಶಿಶಿರ ಕಲ್ಕೂರ, ಪ್ರಸಾಧನದಲ್ಲಿ ಸೋಮನಾಥ ಉಡುಪಿ ಸಹಕರಿಸಿದ್ದರು.
ಮಂಗಳೂರು ವಿ.ವಿ.ಯ ಕುಲಸಚಿವರಾದ ಕಿಶೋರ್ ಕುಮಾರ್ ಸಿ.ಕೆ. ವಿಜೇತರಿಗೆ ಬಹುಮಾನ ನೀಡಿದರು.ಆಳ್ವಾಸ್ ಕಾಲೇಜು ಪ್ರಾಂಶುಪಾಲರಾದ ಪ್ರೊ| ಕುರಿಯನ್ ಅಧ್ಯಕ್ಷತೆ ವಹಿಸಿದ್ದರು.
ನಾಟಕ ತಂಡಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ| ಎಂ. ಮೋಹನ ಆಳ್ವರು ಅಭಿನಂದಿಸಿದ್ದಾರೆ.