ನೆಲ್ಲೂರು ಕೆಮ್ರಾಜೆ ಪ್ಯಾಕ್ಸ್ ನ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗನ್ನಾಥ ಶೆಟ್ಟಿ ರವರಿಗೆ ಬೀಳ್ಕೊಡುಗೆ

0

 

 

ಜು. 31ರಂದು ನಿವೃತ್ತರಾದ ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಗನ್ನಾಥ ಶೆಟ್ಟಿ ಅವರಿಗೆ ಬೀಳ್ಕೊಡುಗೆ ಸಮಾರಂಭವು ಆ
8 ರಂದು ಸುಳ್ಯ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸುಳ್ಯ ತಾಲೂಕು ಸಹಕಾರ ಸಂಘಗಳ 20 ಅಂಶ ಕಾರ್ಯಕ್ರಮದ ಸಭೆಯಲ್ಲಿ ನಡೆಯಿತು. ಸಭಾಧ್ಯಕ್ಷತೆಯನ್ನು ಸಹಕಾರಿ ಯೂನಿಯನ್ ನ ಅಧ್ಯಕ್ಷ ರಮೇಶ್ ದೇಲಂಪಾಡಿ ವಹಿಸಿದರು.

ಪುತ್ತೂರು ವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ ,ದ.ಕ ಜಿಲ್ಲೆ ಕೇಂದ್ರ ಬ್ಯಾಂಕಿನ ಸುಳ್ಯ ಶಾಖೆ ವ್ಯವಸ್ಥಾಪಕ ವಿಶ್ವನಾಥ ಶೆಟ್ಟಿ, ಸುಳ್ಯ ಸಿ.ಎ ಬ್ಯಾಂಕ್ ಅಧ್ಯಕ್ಷ ಬಾಲಗೋಪಾಲ ಎಂ,ನಿರ್ದೇಶಕ ಅಹಮದ್ ಕುಂಞಿ ಎನ್ ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಘದ ಅಧ್ಯಕ್ಷ ನೇಮಿರಾಜ ಪಲ್ಲೋಡಿ ಹಾಗೂ ಜಗನ್ನಾಥ ಶೆಟ್ಟಿ ದಂಪತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.ರಮೇಶ್ ದೇಲಂಪಾಡಿ ಹಾಗೂ ಶ್ರೀಮತಿ ತ್ರಿವೇಣಿ ರಾವ್ ರವರು ಜಗನ್ನಾಥ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಿ ಶುಭ ಹಾರೈಸಿದರು. ಅತಿಥಿಗಳಾದ ಬಾಲಗೋಪಾಲ ಎಂ, ವಿಶ್ವನಾಥ ಶೆಟ್ಟಿ ಹಾಗೂ ನೇಮಿರಾಜ ಪಲ್ಲೋಡಿ ಯವರು ಜಗನ್ನಾಥ ಶೆಟ್ಟಿ ಅವರ ನಿವೃತ್ತಿ ಜೀವನಕ್ಕೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಪುತ್ಯ, ಮನೋಜ್ ಕುಮಾರ್, ಪ್ರದೀಪ್ ಕುಮಾರ್, ಸ್ವ ಸಹಾಯ ಸಂಘಗಳ ತಾಲೂಕು ಮೇಲ್ವಿಚಾರಕ ಶ್ರೀಧರ ಮಣಿಮರ್ದು ಹಾಗೂ ಎಲ್ಲಾ ಪಿ.ಎ.ಸಿ.ಎಸ್ ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮರ್ಕಂಜ ಪಿ.ಎ ಸಿ.ಎಸ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿನಯ್ ಕುಮಾರ್ ಸ್ವಾಗತಿಸಿದ್ದರು. ಅರಂತೋಡು ತೊಡಿಕಾನ ಪಿ.ಎ.ಸಿ.ಎಸ್ .ನ ವಾಸುದೇವ ನಾಯಕ್ ವಂದಿಸಿದರು. ಸುಳ್ಯ ಪಿ.ಎ.ಸಿ.ಎಸ್ ನಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ ಸೂರ್ತಿಲ ನಿರೂಪಿಸಿದರು. ಇದೇ ವೇಳೆ ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಪುತ್ಯ, ಮನೋಜ್ ಕುಮಾರ್ , ಪ್ರದೀಪ್ ಕುಮಾರ್ ನಿವೃತರಾದ ಮುಖ್ಯ ಕಾರ್ಯನಿರ್ವಣಾಧಿಕಾರಿ ಜಗನ್ನಾಥ ಶೆಟ್ಟಿ ಅವರನ್ನು ಸನ್ಮಾನಿಸಿದರು.

LEAVE A REPLY

Please enter your comment!
Please enter your name here