ಚೆಂಬು :  ಶ್ರೀ ಭಗವಾನ್ ಸಂಘದ ಸದಸ್ಯರಿಂದ ಕೊಚ್ಚಿ ಹೋದ ಪಾಲ ಪುನರ್ ರ್ನಿರ್ಮಾಣ

0

ಚೆಂಬು ಗ್ರಾಮದ ಮಾಣಿಕಲ್ಲು ಎಂಬಲ್ಲಿ ಉಂಬಳೆ ನದಿಯಾಚೆ ಅರಣ್ಯ ಅಂಚಿನಲ್ಲಿ ವಾಸವಿರುವ ಒಂಟಿ ಮನೆಗೆ ಇರುವ ಏಕೈಕ ಸಂಪರ್ಕ ದಾರಿಯಾಗಿದ್ದ ಬಿದಿರಿನ ಪಾಲ ಇತ್ತೀಚಿನ ಬಾರೀ ಮಳೆಗೆ ಕೊಚ್ಚಿಹೋಗಿದ್ದು ,ಮನೆಯವರಿಗೆ ಮಾತ್ರವಲ್ಲ ಮಕ್ಕಳಿಗೆ ಕೂಡ ಶಾಲೆಗೆ ಹೋಗಲು ಅಸಾಧ್ಯವಾಗಿತ್ತು.


ಕುಟುಂಬದ ಸಮಸ್ಯೆ ಮನಗಂಡ ಚೆಂಬು ಶ್ರೀ ಭಗವಾನ್ ಸಂಘದ ಸದಸ್ಯರು ಕೊಚ್ಚಿ ಹೋಗಿದ್ದ ಬಿದಿರಿನ ಪಾಲವನ್ನು ಪುನರ್ನಿರ್ಮಾಣ ಮಾಡಿ ಸಂತ್ರಸ್ತ ಕುಟುಂಬಕ್ಕೆ ನೆರವಾಗಿ ಮಾನವೀಯತೆ ಮೆರೆದರು.

ಕಾರ್ಯಾಚರಣೆಯು  ಅನಂತ್ ಊರುಬೈಲು ಮತ್ತು ಸಂಘದ ಅದ್ಯಕ್ಷ  ಯತೀಶ್ ಹನಿಯಡ್ಕರವರ ಮುಂದಾಳತ್ವದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here