ಪ್ರಾಕೃತಿಕ ವಿಕೋಪ ಸಂಭವಿಸಿದ ಕಲ್ಲುಗುಂಡಿಯಲ್ಲಿ ಯಶಸ್ವಿ ಯುವಕ ಮಂಡಲದ ವತಿಯಿಂದ ಸ್ವಚ್ಚತಾ ಕಾರ್ಯ

0

 

ಇತ್ತೀಚೆಗೆ ಸುರಿದ ಭಾರಿ ಮಳೆಗೆ ಹಾಗೂ ಮೇರೆಗೆ ತತ್ತರಿಸಿದ ಕಲ್ಲುಗುಂಡಿಯಲ್ಲಿ ಯಶಸ್ವಿ ಯುವಕ ಮಂಡಲ(ರಿ.) ಕಲ್ಲುಗುಂಡಿ ಇದರ ಸದಸ್ಯರು ಅನೇಕ ನೆರೆ ಸಂತ್ರಸ್ತ ಮನೆಗಳಲ್ಲಿ ಸ್ವಚ್ಚತೆ ಕೆಲಸದಲ್ಲಿ ತೊಡಗಿದ್ದಾರೆ.

 

ಸಂಪಾಜೆ ಗ್ರಾಮದ ಗೂನಡ್ಕ ಬಳಿ ಚರಂಡಿಗೆ ಬಿದ್ದ ಮಣ್ಣು ತೆರವುಗೊಳಿಸುವುದು,ಬಿದಿರು ಮತ್ತು ಮರದ ಕೊಂಬೆಗಳನ್ನು ತೆರವುಗೊಳಿಸುವುದು, ಗ್ರಾಮದ ಎಲ್ಲಾ ಕಡೆ ಪಂಚಾಯತ್ ನೇತೃತ್ವದಲ್ಲಿ ಸಾರ್ವಜನಿಕ ಬಂದುಗಳು ಸಂಘ ಸಂಸ್ಥೆಯ ಸಹ ಬಾಗಿತ್ವದಲ್ಲಿ ಕಲ್ಲುಗುಂಡಿ ಪೇಟೆಯ ಸ್ವಚ್ಛತೆ ಕಾರ್ಯ ನಡೆಸುತ್ತಿದ್ದಾರೆ.

ಮಳೆ ಹಾನಿಯಿಂದ ಮನೆ ಕಳೆದುಕೊಂಡ ಸುಧಾಕರ ಬಾಚಿಗದ್ದೆ ಇವರಿಗೆ ಯುವಕ ಮಂಡಲ ಸದಸ್ಯರು ಆಹಾರ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

LEAVE A REPLY

Please enter your comment!
Please enter your name here