ಕನಕಮಜಲು: ಹರ್ ಘರ್ ತಿರಂಗಾ ಪ್ರಯುಕ್ತ ಮನೆ ಮನೆಗೆ ರಾಷ್ಟ್ರಧ್ವಜ ವಿತರಣೆ ಕುರಿತು ಸಭೆ

0

 

ವಿವಿಧ ಸಂಘಸಂಸ್ಥೆಗಳ ಮೂಲಕ ರಾಷ್ಟ್ರಧ್ವಜ ಹಸ್ತಾಂತರ

ಈ ಬಾರಿಯ75ನೇ ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರವು ಹಮ್ಮಿಕೊಂಡಿರುವ “ಹರ್ ಘರ್ ತಿರಂಗಾ” ಅಭಿಯಾನದ ಪ್ರಯುಕ್ತ ಪ್ರತೀ ಮನೆ ಮನೆಗೆ ರಾಷ್ಟ್ರಧ್ವಜ ವಿತರಣೆ ಕುರಿತು ಸಭೆಯು ಕನಕಮಜಲು ಗ್ರಾಮ ಪಂಚಾಯತಿ ಸಭಾಭವನದಲ್ಲಿ ಆ.10ರಂದು ನಡೆಯಿತು.


ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಧರ ಕುತ್ಯಾಳ ಅವರು ಅಧ್ಯಕ್ಷತೆ ವಹಿಸಿದ್ದರು. ಗ್ರಾಮದಲ್ಲಿ ಒಟ್ಟು 498 ಮನೆಗಳಿದ್ದು, ಪ್ರತೀ ಮನೆಗೂ ರಾಷ್ಟ್ರಧ್ವಜ ವಿತರಿಸುವ ಸಲುವಾಗಿ ಗ್ರಾಮ ಪಂಚಾಯತಿ ವತಿಯಿಂದ ಸಂಜೀವಿನಿ ಸಂಘದ ಸಹಕಾರದಿಂದ ಐನೂರು ರಾಷ್ಟ್ರಧ್ವಜವನ್ನು ಹೊಲಿಗೆ ಮಾಡಿಸಲಾಗಿದ್ದು, ಗ್ರಾಮದ ಸಂಜೀವಿನಿ ಸಂಘ, ಗ್ರಾಮ ಪಂಚಾಯತಿ, ಕನಕಮಜಲು ಯುವಕ ಮಂಡಲ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯತಿ ಸದಸ್ಯರುಗಳು ಸೇರಿಕೊಂಡು ಪ್ರತೀ ಮನೆ ಮನೆಗೂ ರಾಷ್ಟ್ರಧ್ವಜ ವಿತರಣೆ ಮಾಡಲಿದ್ದು, ಗ್ರಾಮ ಪಂಚಾಯತಿ ವತಿಯಿಂದ ರಾಷ್ಟ್ರಧ್ವಜಗಳನ್ನು ಹಸ್ತಾಂತರ ಮಾಡಲಾಯಿತು.

 

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರೋಜಿನಿ, ಕಾರ್ಯದರ್ಶಿ ರಮೇಶ್ , ಉಪಾಧ್ಯಕ್ಷೆ ಶ್ರೀಮತಿ ದೇವಕಿ ಕುದ್ಕುಳಿ, ಸದಸ್ಯರುಗಳಾದ ಇಬ್ರಾಹಿಂ ಕಾಸಿಂ ಕನಕಮಜಲು, ರವಿಚಂದ್ರ ಕಾಪಿಲ, ಶ್ರೀಮತಿ ಪ್ರೇಮಲತಾ ಪಂಜಿಗುಂಡಿ, ಸಂಜೀವಿನಿ ಸಂಘದ ಎಂ.ಬಿ.ಕೆ. ಶ್ರೀಮತಿ ಭವಾನಿ ಮಾಣಿಮಜಲು, ಗ್ರಾಮ ಪಂಚಾಯತಿ ಗ್ರಂಥಪಾಲಕಿ ಶ್ರೀಮತಿ ನಮಿತ ಕಾರಿಂಜ, ಯುವಕ ಮಂಡಲದ ಅಧ್ಯಕ್ಷ ಬಾಲಚಂದ್ರ ನೆಡಿಲು ಸೇರಿದಂತೆ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here