ಸುಣ್ಣಮೂಲೆಯಲ್ಲಿ ತಲ್ವಾರ್ ಹಿಡಿದು ನಡೆದಾಡಿದ ಯುವಕ ಅಂದರ್; ಕೇಸು ದಾಖಲು

0

 

ಸುಣ್ಣಮೂಲೆ ಬಳಿ ತಲ್ವಾರ್ ಹಿಡಿದು ನಡೆದಾಡಿದ ಯುವಕನನ್ನು ಸುಳ್ಯ ಪೊಲೀಸರು ಬಂಧಿಸಿದ್ದು, ಆತನ ಮೇಲೆ ಕೇಸು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಸಂದೀಪ್ ಎಂಬ ಯುವಕ ತಲವಾರು ಹಿಡಿದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಮನಿಸಿದ ಸಂದೀಪ್ ನನ್ನು ಸುಳ್ಯ ಪೊಲೀಸರು ಬಂಧಿಸಿದ್ದು ಸುಮೊಟೋ ಪ್ರಕರಣ ದಾಖಲಿಸಿದ್ದಾರೆ.

ಸಂದೀಪ್ ವಿಪರೀತ ಮದ್ಯ ಸೇವನೆಯ ಚಟ ಹೊಂದಿದ್ದು, ಕಳೆದ 8 ತಿಂಗಳಿನಿಂದ ಮದ್ಯಪಾನ ಸೇವನೆ ನಿಲ್ಲಿಸಿದ್ದು, ನಿನ್ನೆಯ ದಿನ ಮದ್ಯಪಾನ ವಾಪಾಸು ಆರಂಭಿಸಿದ ಹಿನ್ನೆಲೆಯಲ್ಲಿ ಮಾನಸಿಕ ಸ್ಥಿರತೆ ಕಳೆದುಕೊಂಡು ಈ ರೀತಿ ವರ್ತಿಸಿದ್ದಾನೆ ಎಂದು ತಿಳಿದುಬಂದಿದೆ.

ಜನರು ಯಾವುದೇ ಭಯಭೀತರಾಗುವುದು ಬೇಡ ಎಂದು ಸುಳ್ಯ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here