ಶಿರೂರು ಭೇಟಿ ನೀಡಿದ ಸಚಿವ ಎಸ್.ಅಂಗಾರ

0

 

ಅಧಿಕಾರಿಗಳೊಂದಿಗೆ ಮಳೆಗೆ ಹಾನಿಯಾದ ನಾಡದೋಣಿಗಳ ಪರಿಶೀಲನೆ

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಅಳ್ವೆಗದ್ದೆ ಸಮುದ್ರ ತೀರದಲ್ಲಿ ಇಟ್ಟಿದ್ದ 30ಕ್ಕೂ ಹೆಚ್ಚು ನಾಡದೋಣಿಗಳು ಆ.1 ರಂದು ಸುರಿದ ಮಳೆಗೆ ಹಾನಿಗೀಡಾಗಿದ್ದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರರವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಬಗ್ಗೆ ಪರಿಶೀಲಿಸಿದರು.
ಈಗಾಗಲೇ ಈ ಬಗ್ಗೆ ಜಿಲ್ಲಾಡಳಿತದಿಂದ ವರದಿ ತರಿಸಿ ಸರಕಾರಕ್ಕೆ ಸಲ್ಲಿಸಿದ್ದು ಎನ್.ಡಿ.ಆರ್.ಎಫ್. ನಿಯಮಾವಳಿ ಪ್ರಕಾರ ಕೇವಲ 4,500 ರೂ. ಪರಿಹಾರ ವಿತರಿಸಬಹುದಾಗಿದ್ದು ಈ ಪರಿಹಾರಧನವನ್ನು ಗರಿಷ್ಠ ಮೊತ್ತಕ್ಕೆ ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

ನಷ್ಟ ಅನುಭವಿಸಿದ ಮೀನುಗಾರರಿಗೆ ಸಚಿವರು ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಬೈಂದೂರು ಶಾಸಕರಾದ ಬಿ.ಎಂ.ಸುಕುಮಾರ್ ಶೆಟ್ಟಿ, ಉಡುಪಿ ಬಿ.ಜೆ.ಪಿ.‌ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಪ್ರಸನ್ನ, ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಕೆ.ರಾಜು, ಉಡುಪಿ ಜಿಲ್ಲಾ ಮೀನುಗಾರಿಕೆ ಇಲಾಖೆ ಜಂಟಿನಿರ್ದೇಶಕ ಗಣೇಶ್, ಉಪನಿರ್ದೇಶಕರಾದ ಶಿವಕುಮಾರ್, ಬಂದರು ಇಲಾಖೆಯ ಮುಖ್ಯ ಅಭಿಯಂತರ ಉದಯ ಕುಮಾರ್, ಉಪ್ಪುಂದ ಮೀನುಗಾರರ ಸಂಘದ ಅಧ್ಯಕ್ಷರಾದ ಆನಂದ ಅಂಗಡಿ ಸೇರಿದಂತೆ ಸ್ಥಳೀಯ ಮುಖಂಡರು ಮೀನುಗಾರರು ಉಪಸ್ಥಿತರಿದ್ದರು.