ಸುಳ್ಯ ರೋಟರಿ ಪ್ರೌಢಶಾಲೆಯಲ್ಲಿ ದೇಶಭಕ್ತಿಗೀತೆ ಗಾಯನ ಅಭಿಯಾನದ 9ನೇ ಕಾರ್ಯಕ್ರಮ

0

 

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಭಾವನಾ ಸುಗಮ ಸಂಗೀತ ಬಳಗ ಸುಳ್ಯ ಸಹಯೋಗದಲ್ಲಿ ನಡೆಯುತ್ತಿರುವ ದೇಶಭಕ್ತಿ ಗೀತೆ ಗಾಯನ ಅಭಿಯಾನ-2022 ಸರಣಿಯ 9ನೇ ಕಾರ್ಯಕ್ರಮ ಸುಳ್ಯದ ರೋಟರಿ ಪ್ರೌಢಶಾಲೆಯಲ್ಲಿ ನಡೆಯಿತು.ರೋಟರಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ಗಿರಿಜಾಶಂಕರ್ ತುದಿಯಡ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ
“ಕಲೆ ಮತ್ತು ಸಾಹಿತ್ಯದಲ್ಲಿ ಅಭಿರುಚಿ ಹೊಂದಿರದ ಮನುಷ್ಯನ ಜೀವನದಲ್ಲಿ ಸತ್ವವಿಲ್ಲ.ದೇಶಭಕ್ತಿ ಗೀತೆಗಳನ್ನು ಆಲಿಸುವ ಮೂಲಕ ತನ್ನಿಂತಾನೇ ನಮ್ಮಲ್ಲಿ ದೇಶಭಕ್ತಿಯ ಭಾವ ಚಿಮ್ಮುತ್ತದೆ,ಸಾಧನೆಗೆ ಪ್ರೇರಣೆ ನೀಡುತ್ತದೆ” ಎಂದು ಹೇಳಿದರು.

ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಸಭಾಧ್ಯಕ್ಷತೆಯನ್ನು ವಹಿಸಿದ್ದರು.ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ,ಕೋಶಾಧಿಕಾರಿ ದಯಾನಂದ ಆಳ್ವ,ಭಾವನಾ ಸುಗಮ ಸಂಗೀತ ಬಳಗದ ನಿರ್ದೇಶಕ, ಗಾಯಕ ಕೆ.ಆರ್.ಗೋಪಾಲಕೃಷ್ಣ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಶ ರಾಮಚಂದ್ರ ಪಲ್ಲತಡ್ಕ,ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಗೌಡ,ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷರಾದ ಗಣೇಶ್ ಭಟ್,ರೋಟರಿ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಶೋಭಾ,ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ,ಗಾಯಕಿಯರಾದ ಕುಮಾರಿ ಶುಭದಾ ಆರ್.ಪ್ರಕಾಶ್ ಹಾಗೂ ಕುಮಾರಿ ಲಿಪಿ ಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚಂದ್ರಶೇಖರ ಪೇರಾಲು ಪ್ರಾಸ್ತಾವಿಕ ನುಡಿಗಳನ್ನಾಡಿದರು.


ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ ಸ್ವಾಗತಿಸಿ,ತೇಜಸ್ವಿ ಕಡಪಳ ಧನ್ಯವಾದಗೈದರು.
ಸಹ ಶಿಕ್ಷಕಿ ರಮ್ಯಾ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ದೇಶಭಕ್ತಿ ಗೀತೆ ಗಾಯನ ಜರುಗಿತು.