ಕಲ್ಮಡ್ಕ : ಮಾಜಿ ಗ್ರಾ.ಪಂ.ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಸದಸ್ಯರನ್ನು ಕರೆದು ಧ್ವಜಾರೋಹಣ

0

ಕಲ್ಮಡ್ಕ ಗ್ರಾಮ ಪಂಚಾಯತ್ ವತಿಯಿಂದ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 14 ರಂದು ಕಲ್ಮಡ್ಕ ಗ್ರಾಮ ಪಂಚಾಯತ್ ನಲ್ಲಿ ವಿಶೇಷವಾಗಿ 1994-95 ರಿಂದ 2020-21 ನೇ ಸಾಲಿನ ವರೆಗಿನ ಮಾಜಿ ಅಧ್ಯಕ್ಷರುಗಳು ,  ಉಪಾಧ್ಯಕ್ಷರುಗಳು ಮತ್ತು ಸದಸ್ಯರುಗಳನ್ನು ಆಹ್ವಾನಿಸಿ ಧ್ವಜಾರೋಹಣ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಧ್ವಜಾರೋಹಣವನ್ನು ಮಾಜಿ ಅಧ್ಯಕ್ಷರಾದ ಶ್ರೀಮತಿ ಪಾರ್ವತಿ ಪುಚ್ಚಮ ನೆರವೇರಿಸಿದರು.


ಮಾಜಿ ಅಧ್ಯಕ್ಷರುಗಳಾದ ಮಹಮ್ಮದ್ ಹನೀಫ್, ಅಬ್ದುಲ್ ಗಫೂರ್, ಧರ್ಮಣ್ಣ ನಾಯ್ಕ, ಉಪಾಧ್ಯಕ್ಷರುಗಳಾದ ಶಿವಪ್ಪ ನಾಯ್ಕ ಕೋಡಿಯಡ್ಕ, ಪುಷ್ಪಾ ಡಿ.ಹೆಚ್ ಚೀಮುಳ್ಳು, ಸುರೇಶ್ ಕುಮಾರ್ ನಡ್ಕ, ಸದಸ್ಯರುಗಳಾದ ರಾಮಣ್ಣ ಗೌಡ ರಾಮತ್ತಿಕಾರ್, ಗುಲಾಬಿ ಮಂಚಿಕಟ್ಟೆ, ಲಕ್ಷ್ಮೀ ನಾರಾಯಣ ನಡ್ಕ, ಯಮುನಾ ಓಟೆಕಜೆ, ಶ್ಯಾಮಲಾ ಮಂಚಿಕಟ್ಟೆ, ಶಿವರಾಮ ಬಿ, ದಿಲೀಪ್ ಕುಮಾರ್ ಬಾಬ್ಲುಬೆಟ್ಟು, ಸುಮಲತಾ ಎಡಪತ್ಯ, ಪ್ರಸ್ತುತ ಸಾಲಿನ ಅಧ್ಯಕ್ಷರಾದ ಶ್ರೀಮತಿ ಹಾಜಿರಾ ಗಫೂರ್, ಸದಸ್ಯರುಗಳಾದ ಲೋಕೇಶ್ ಆಕ್ರಿಕಟ್ಟೆ, ಹರೀಶ್ ಮಾಳಪ್ಪಮಕ್ಕಿ, ಪವಿತ್ರ ಕುದ್ವ, ಮೀನಾಕ್ಷಿ ಕೆ, ಮೋಹಿನಿ ಎಂ, ಜಯಲತಾ ಕೆ.ಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಸಿ.ವಿ, ಕಾರ್ಯದರ್ಶಿ ಗೋಪಾಲಕೃಷ್ಣ ಕೆ, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಶೇಷಪ್ಪ, ತೀರ್ಥಪ್ರಸಾದ್ ಎಂ, ನವೀನ್ ಕುಮಾರ್, ಸಂಜೀವಿನಿ ಸಂಘದ ಪದಾಧಿಕಾರಿಗಳಾದ ಅನಿತಾ, ಶಾಲಾ ಮಕ್ಕಳು ಹಾಗೂ ಊರವರು ಉಪಸ್ಥಿತರಿದ್ದರು.