ಕನಕಮಜಲು ಮಳೆ ನೀರು ಹರಿದು ಮನೆಯ ಗೋಡೆ ಬಿರುಕು

0

ಕನಕ ಮಜಲು ಶಾಲೆಯ ಬಳಿ ಮನೆಯೊಂದರ ಬಳಿ ಮಳೆ ನೀರು ಹರಿದು ಮನೆಯ ಗೋಡೆ ಬಿರುಕು ಬಿಟ್ಟಿರುವ ಘಟನೆ ವರದಿಯಾಗಿದೆ.
ಕನಕ ಮಜಲು ಶಾಲೆಯ ಬಳಿ ಕತಿಜಮ್ಮ ಎಂಬುವವರ ಮನೆ ಇದಾಗಿದ್ದು ಈ ಭಾಗದಲ್ಲಿ ಮೇಲ್ಭಾಗದಿಂದ ಹರಿದು ಬರುವ ನೀರು ಚರಂಡಿ ವ್ಯವಸ್ಥೆ ಇಲ್ಲದೆ ಗೋಡೆಗೆ ಹಾನಿ ಉಂಟುಮಾಡಿದ್ದು ಗೋಡೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ನೀರಿಗೆ ಚರಂಡಿ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ಸಂಬಂಧಪಟ್ಟವರಿಗೆ ಈ ಮೊದಲು ತಿಳಿಸಿದರು ಯಾವುದೇ ಪ್ರಯೋಜನ ಬರಲಿಲ್ಲ ಎಂದು ಮನೆಯವರು ತಮ್ಮ ಅಹವಾಲುವನ್ನು ಹೇಳುತ್ತಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇತ್ತ ಗಮನ ಅರಿಸಿ ಮುಂದೆ ಉಂಟಾಗಬಲ್ಲ ಅನಾಹುತವನ್ನು ತಪ್ಪಿಸಬೇಕೆಂದು ಮನೆಯವರು ವಿನಂತಿಸಿಕೊಳ್ಳುತ್ತಿದ್ದಾರೆ.

LEAVE A REPLY

Please enter your comment!
Please enter your name here