ಆಲೆಟ್ಟಿ ಪಂಚಾಯತ್ ನಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಸನ್ಮಾನ ಕಾರ್ಯಕ್ರಮ

0

 

ಆಲೆಟ್ಟಿ ಗ್ರಾಮ ಪಂಚಾಯತ್ ನಲ್ಲಿ 75 ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯು ಆ.15 ರಂದು ಆಚರಿಸಲಾಯಿತು.


ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಕುಡೆಕಲ್ಲು ರವರ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಪಶು ವೈದ್ಯರಾದ ಡಾ.ನಿತಿನ್ ಪ್ರಭು ರವರನ್ನು ಸನ್ಮಾನಿಸಲಾಯಿತು.


ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ಸವಿ ನೆನಪಿಗಾಗಿ ಮೂರು ರಸ್ತೆ ಗಳಿಗೆ ನಾಮಕರಣ ಮಾಡುವುದಾಗಿ ಅಧ್ಯಕ್ಷ ರು ತಿಳಿಸಿದರು.
ಹಿರಿಯ ಸಾಹಿತಿ ಡಾ.ಪ್ರಭಾಕರ ಶಿಶಿಲ ರವರು ಬರೆದ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟ‌ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಗ್ರಾಮಸ್ಥರ ಪರವಾಗಿ ಹಿರಿಯ ಸಾಹಿತಿ ಡಾ.ಪ್ರಭಾಕರ ಶಿಶಿಲ ರವರನ್ನು ಸನ್ಮಾನಿಸಲಾಯಿತು. ಪಿಂಚಣಿ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಲಾಯಿತು. ವೇದಿಕೆಯಲ್ಲಿ ಪಂ.ಉಪಾಧ್ಯಕ್ಷ ದಿನೇಶ್ ಕಣಕ್ಕೂರು,
ಆಲೆಟ್ಟಿ ಸಹಕಾರಿ ಸಂಘದ ನಿವೃತ್ತ ಸಿ.ಇ.ಒ ಸುಧಾಮ ಆಲೆಟ್ಟಿ, ಸದಸ್ಯರಾದ ಮುತ್ತಪ್ಪ ಪೂಜಾರಿ ಮೊರಂಗಲ್ಲು,ಸತ್ಯ ಕುಮಾರ್ ಆಡಿಂಜ, ಚಂದ್ರಕಾಂತ ನಾರ್ಕೋಡು, ರತೀಶನ್ ಅರಂಬೂರು, ವೀಣಾವಸಂತ ಆಲೆಟ್ಟಿ, ಭಾಗೀರಥಿ ಪತ್ತುಕುಂಜ, ಶಿವಾನಂದ ರಂಗತ್ತಮಲೆ, ಅನಿತಾ ಅರಂಬೂರು, ಶಂಕರಿ ಕೊಲ್ಲರಮೂಲೆ, ಕಮಲ ನಾಗಪಟ್ಟಣ, ಮೀನಾಕ್ಷಿ ಕುಡೆಕಲ್ಲು, ಪಿ.ಡಿ.ಒ.ಕೀರ್ತಿಪ್ರಸಾದ್, ಹಿರಿಯ ಕೃಷಿಕ ಶಿವರಾಮ ಗೌಡ ಕಲ್ಲೆಂಬಿ ಉಪಸ್ಥಿತರಿದ್ದರು.
ಯುವಕ ಮಂಡಲದ ಪದಾಧಿಕಾರಿಗಳು, ಸದಸ್ಯರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಸ್ಥಳೀಯ ನಾಗರಿಕರು, ಪಂ.ಸಿಬ್ಬಂದಿ ವರ್ಗದವರು ಭಾಗವಹಿಸಿದರು. ಸದಸ್ಯ ಶಿವಾನಂದ ರಂಗತ್ತಮಲೆ ಕಾರ್ಯಕ್ರಮ ನಿರೂಪಿಸಿದರು.