ದುಗ್ಗಲಡ್ಕದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ – ಧ್ವಜಾರೋಹಣ

0

ದುಗ್ಗಲಡ್ಕದ ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳುಕೂಟ ದುಗ್ಗಲಡ್ಕ ಇದರ ವತಿಯಿಂದ  75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ದುಗ್ಗಲಡ್ಕದ ಯುವಕ ಮಂಡಲದ ಕಟ್ಟಡದ ಮುಂಭಾಗದಲ್ಲಿ ಧ್ವಜಾರೋಹಣ ನಡೆಯಿತು.


ಧ್ವಜಾರೋಹಣವನ್ನು ದುಗ್ಗಲಡ್ಕ ಹಾಲು ಸೊಸೈಟಿಯ ಮಾಜಿ ಅಧ್ಯಕ್ಷೆ ಶ್ರೀಮತಿ ವಾರಿಜ ಕೊರಗಪ್ಪ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ನಿವೃತ್ತ ಮುಖ್ಯ ಶಿಕ್ಷಕ ಚಂದ್ರಶೇಖರ ಗೌಡ ಮೋಂಟಡ್ಕ  ಭಾಗವಹಿಸಿ ಮಾತನಾಡಿದರು. ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ ಶುಭ ಹಾರೈಸಿದರು.
ಮಾಜಿ ನ.ಪಂ.ಸದಸ್ಯ ಇಬ್ರಾಹಿಂ ನೀರಬಿದಿರೆ,ಯುವಕ ಮಂಡಲದ ಅಧ್ಯಕ್ಷ ದಿನೇಶ್ ಮೂಡೆಕಲ್ಲು, ಮಾಜಿ ಅಧ್ಯಕ್ಷರುಗಳಾದ ಧನಂಜಯ ಕಲ್ಮಡ್ಕ, ಲಿಂಗಪ್ಪ ಮೂಡೆಕಲ್ಲು,ಕೋಶಾಧಿಕಾರಿ ಚಿದಾನಂದ ಕೊಯಿಕುಳಿ,ಕೃಷ್ಣ ಸ್ವಾಮಿ ಕಂದಡ್ಕ, ರಮೇಶ್ ನೀರಬಿದಿರೆ, ಮೊದಲಾದವರು ಉಪಸ್ಥಿತರಿದ್ದರು. ಪೂರ್ವಾಧ್ಯಕ್ಷರಾದ  ಭವಾನಿಶಂಕರ ಕಲ್ಮಡ್ಕ ಸ್ವಾಗತಿಸಿ, ಕೆ.ಟಿ.ಭಾಗೀಶ್ ವಂದಿಸಿದರು, ಮನೋಜ್ ಪಾನತ್ತಿಲ ಕಾರ್ಯಕ್ರಮ ನಿರೂಪಿಸಿದರು.