ಕೆ.ವಿ.ಜಿ. ಕಾನೂನು ಕಾಲೇಜಿನಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆ

0

ಕೆ.ವಿ.ಜಿ ಕಾನೂನು ಕಾಲೇಜಿನಲ್ಲಿ  ೭೫ನೇ ವರ್ಷದ ಸ್ವಾತಂತ್ರ್ಯ್ನ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ವಿಧ್ಯಾರ್ಥಿ ಕ್ಷೇಮಾಧಿಕಾರಿ ಶ್ರೀಮತಿ ಟೀನಾ ಹೆಚ್.ಎಸ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ನಿವೃತ ಯೋಧ ಶ್ರೀ ತಿರುಮಲೇಶ್ವರ ಸಣ್ಣಮನೆ, ಕುಕ್ಕಂದೂರು ಧ್ವಜಾರೋಹಣ ನೆರವೇರಿಸಿ, ವಿಧ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ವಿಧ್ಯಾರ್ಥಿನಿಯರಾದ ಲತಾಕುಮಾರಿ ಸ್ವಾಗತಿಸಿ, ಅನಘಾ ಆರ್ ವಂದಿಸಿದರು. ವಿಧ್ಯಾರ್ಥಿ ವಿಜೇತ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಸ್ವಾತಂತ್ರ್ಯ್ನ ದಿನಾಚರಣೆ ಅಂಗವಾಗಿ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಬೋದಕ, ಬೋದಕೇತರ ವೃಂದದವರು ಭಾಗವಹಿಸಿದ್ದರು.