ಅರಂಬೂರು ಮಸೀದಿ ಮತ್ತು ಮದರಸ ವಠಾರದಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

0

 

ಅರಂಬೂರು ಬದರ್ ಜುಮಾ ಮಸೀದಿ ಹಾಗೂ ಅಲ್ ಫಲಾಹ್ ಮದರಸ ಇದರ ವತಿಯಿಂದ 75 ನೇ ಸ್ವಾಂತಂತ್ರ್ಯ ದಿನಾಚರಣೆ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ನೆರವೇರಿತು.


ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಬಾಪು ಸಾಹೇಬ್ ಅರಂಬೂರು ದ್ವಜರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ಆಡಳಿತ ಸಮಿತಿ ಅಧ್ಯಕ್ಷರಾದ ಭಾಷಾ ಸಾಹೇಬ್ ವಹಿಸಿದ್ದರು.
ಖತೀಬ್ ಉಸ್ತಾದ್ ಮೂಸಾ ಹಾರಿಸ್ ಮಕ್ಷೂಮಿ, ಬಶೀರ್ ಉಸ್ತಾದ್, ಸಮಿತಿ ಕಾರ್ಯದರ್ಶಿ ಬಷೀರ್, ಮದ್ರಸ ಉಸ್ತುವಾರಿ ಅಕ್ಬರ್ ಕರಾವಳಿ, ಕಮಿಟಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದರು.ಆಸೀಫ್ ಸ್ವಾಗತಿಸಿ,ವಂದಿಸಿದರು.

LEAVE A REPLY

Please enter your comment!
Please enter your name here