ಅನ್ಸಾರಿಯದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಉಚಿತ ದಂತ ತಪಾಸಣೆ ಶಿಬಿರ ಮತ್ತು ದಂತ ಸಂರಕ್ಷಣೆ ಕುರಿತು ಮಾಹಿತಿ ಕಾರ್ಯಕ್ರಮ

0

 

p>

ವಿದ್ಯಾರ್ಥಿಗಳಿಗೆ ಉಚಿತ ಟೂತ್‌ಪೇಸ್ಟ್ ಮತ್ತು ದಂತ ಸಂರಕ್ಷಣೆ ಉಪಕರಣಗಳ ಕೊಡುಗೆ

ಫಾತಿಮ ಸ್ಮೈಲ್ ಸಿಟಿ ಡೆಂಟಲ್ & ಒರಲ್ ಹೆಲ್ತ್ ಸೆಂಟರ್ ವತಿಯಿಂದ ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ಇದರ ಸಹಭಾಗಿತ್ವದಲ್ಲಿ ಸ್ವಾತಂತ್ರ್ಯೋತವದ ಅಂಗವಾಗಿ ಅನ್ಸಾರಿಯ ಎಜುಕೇಶನ್ ಸೆಂಟರ್ ವಿದ್ಯಾರ್ಥಿಗಳಿಗೆ ಉಚಿತ ದಂತ ತಪಾಸಣೆ ಮತ್ತು ದಂತ ಸಂರಕ್ಷಣೆ ಕುರಿತು ಮಾಹಿತಿ ಕಾರ್ಯಕ್ರಮ ಅ.14 ರಂದು ಅನ್ಸಾರಿಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಅನ್ಸಾರಿಯ ಖತೀಬರಾದ ಉಮ್ಮರ್ ಮುಸ್ಲಿಯಾರ್ ಮರ್ದಾಳ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ಅಧ್ಯಕ್ಷ ಲತೀಫ್ ಹರ್ಲಡ್ಕ ಅಧ್ಯಕ್ಷತೆ ವಹಿಸಿದ್ದರು.
ಫಾತಿಮ ಸ್ಮೈಲ್ ಸಿಟಿ ಪಾಲುದಾರರಾದ ಡಾ ಶಾಫಿ ಮತ್ತು ಡಾ.ಸರ್ಪ್ರಾಜ್ ರವರನ್ನು ನುಸ್ರತುಲ್ ವತಿಯಿಂದ ಅಭಿನಂದಿಸಿ ಗೌರವಿಸಿದರು.
ಡಾ.ಅನಸ್ ದಂತ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು.
ಡಾ.ಫಾತಿಮ,ಡಾ.ಜಾಸ್ಮಿನ್ ಉಪಸ್ಥಿತರಿದ್ದರು.
ಅನ್ಸಾರಿಯ ಉಪಾಧ್ಯಕ್ಷ ಹಾಜಿ ಅಬ್ದುಲ್‌ ಕಲಾಂ ಕಟ್ಟೆಕ್ಕಾರ್, ಎಲಿಮಲೆ ಜಮಾಯತ್ ಕಮಿಟಿ ಉಪಾಧ್ಯಕ್ಷ ಯೂಸುಫ್ ಹಾಜಿ ಜಿರ್ಮುಕಿ, ಕಾರ್ಯದರ್ಶಿ ಅಶ್ರಫ್ ‌ಜೆ ಕೆ, ಅನ್ಸಾರಿಯ ಖತೀಬ್ ಅಬೂಭಕ್ಕರ್ ಹಿಮಮಿ ಸಖಾಫಿ ಅನ್ಸಾರಿಯ ಸಹ ಅಧ್ಯಾಪಕರು ಮೊದಲಾದವರು ಸಹಕರಿಸಿದರು.
ನುಸ್ರತ್ ಪ್ರಧಾನ ಕಾರ್ಯದರ್ಶಿ ಸೂಫಿ ಎಲಿಮಲೆ ಸ್ವಾಗತಿಸಿ ಅನ್ಸಾರಿಯ ಕಾರ್ಯದರ್ಶಿ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿ ಅನ್ಸಾರಿಯ ವ್ಯವಸ್ಥಾಪಕ ಉವೈಸ್ ವಂದಿಸಿದರೂ.

LEAVE A REPLY

Please enter your comment!
Please enter your name here